ವೈರಲ್ ಆದ ಚಿಲಿ ಪೊಲೀಸ್ ಶ್ವಾನಗಳು
Team Udayavani, Sep 22, 2018, 5:34 AM IST
ಪೊಲೀಸ್ ಶ್ವಾನಗಳ ಚಂದ, ಗತ್ತು, ಗೈರತ್ತನ್ನು ನೋಡುವುದೇ ಒಂದು ಖುಷಿ. ಅದಕ್ಕಾಗಿಯೇ ಪೊಲೀಸ್ ಶ್ವಾನಗಳಿಗೆ ತರಬೇತಿ ನೀಡುವ, ಅವುಗಳು ಕಾರ್ಯಾಚರಣೆ ನಡೆಸುವ ವಿಡಿಯೋಗಳು ವೈರಲ್ ಆಗುತ್ತವೆ. ಚಿಲಿ ದೇಶದ 208ನೇ ಸ್ವಾತಂತ್ರ್ಯದಿನಾಚರಣೆಯ ಪೊಲೀಸ್ ನಾಯಿಗಳ ಪರೇಡ್ ವಿಡಿಯೋವೊಂದು ವೈರಲ್ ಆಗಿದೆ.
ಮುದ್ದಾದ ಗೋಲ್ಡನ್ ರಿಟ್ರಿವರ್ ನಾಯಿ ಮರಿಗಳನ್ನು ಹಸಿರು ಚೀಲಗಳಲ್ಲಿ ಇರಿಸಿ ಹೆಗಲಿಗೆ ನೇತುಹಾಕಿಕೊಂಡು ಮಹಿಳಾ ಪೊಲೀಸರು ಪರೇಡ್ ನಲ್ಲಿ ಭಾಗವಹಿಸಿದ್ದರು. ನಾಯಿಗಳಿಗೂ ಪೊಲೀಸರು ಹಾಕಿದಂಥದ್ದೇ ಪುಟ್ಟ ಗಾತ್ರದ ಬೂಟುಗಳನ್ನು ಹಾಕಲಾಗಿತ್ತು. ಒಟ್ಟಿನಲ್ಲಿ ಈ ಪೊಲೀಸ್ ಶ್ವಾನಗಳು ಜಾಲತಾಣಿಗರ ಮನ ಕದಿಯುವಲ್ಲಿ ಸಫಲವಾಗಿವೆ.