ಕಳವಿನ ಪ್ರಯತ್ನದ ವಿಡಿಯೋ ವೈರಲ್
Team Udayavani, Oct 4, 2018, 5:36 AM IST
ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಸಾರ್ವಕಾಲಿಕ ಮಾತು. ಅಮೆರಿಕದ ಮೇರಿಲ್ಯಾಂಡ್ನಲ್ಲಿ ನಡೆದ ಘಟನೆ ಅದನ್ನು ಪುಷ್ಟೀಕರಿಸುತ್ತದೆ. ರೆಸ್ಟಾರೆಂಟ್ ಒಂದಕ್ಕೆ ನುಗ್ಗಿ ವಸ್ತುಗಳನ್ನು ಕಳವು ಮಾಡಬೇಕು ಎಂದು ಯೋಚಿಸಿ ಒಬ್ಟಾತ ನುಗ್ಗಿದ. ಒಳ ಪ್ರವೇಶದ ಹಂತ ಯಶಸ್ವಿಯಾಯಿತು ಎನ್ನೋಣ. ನಂತರ ಕಳವು ಮಾಡಬೇಕಾದಲ್ಲಿಗೆ ಹೋಗಬೇಕಾದರೆ ದೊಡ್ಡ ಗಾಜಿನ ಬಾಗಿಲು ಇತ್ತು. ಅದನ್ನು ಒಡೆಯಲು ಕಾಂಕ್ರಿಟ್ ಇಟ್ಟಿಗೆ ತೆಗೆದು ಮೂರು ಬಾರಿ ಗುದ್ದಿದ. ಊಹೂಂ ಅದು ಜಗ್ಗಲೇ ಇಲ್ಲ. ಕೊನೆಯ ಹೊಡೆತಕ್ಕೆ ಕಾಂಗ್ರೆಸ್ ಇಟ್ಟಿಗೆಯೇ ತುಂಡಾಗಿ, ಕಳ್ಳನ ಮುಖಕ್ಕೆ ಮತ್ತು ತಲೆಗೆ ಬಡಿಯಿತು. ಆ ಏಟಿಗೆ ಆತ ಕೆಳಕ್ಕೆ ಬಿದ್ದ. ಕೆಲ ಕಾಲ ಆತ ನೆಲದಲ್ಲಿಯೇ ಬಿದ್ದಿದ್ದ. ಆತನ ಕೃತ್ಯಗಳೆಲ್ಲ ಸಿಸಿಟಿವಿಯಲ್ಲಿ ದಾಖಲಾಗುತ್ತಲೇ ಇತ್ತು.
ಸೆ.20ರಂದು ನಡೆದ ಘಟನೆಯನ್ನು ಮೇರಿಲ್ಯಾಂಡ್ ಪೊಲೀಸರು ಮಂಗಳವಾರ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಈ ಬಗ್ಗೆ ತನಿಖೆಯನ್ನೂ ಆರಂಭಿಸಿರುವುದಾಗಿ ಹೇಳಿದ್ದಾರೆ. ಹಲವರು ಕುತೂಹಲದಿಂದ ಅದನ್ನು ವೀಕ್ಷಿಸಿಯೂ ಇದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ