CONNECT WITH US  

ಅಸಹ್ಯಕರ ಖಾದ್ಯಕ್ಕೂ ಪ್ರದರ್ಶನ ಭಾಗ್ಯ

ಆಹಾರ ಮೇಳ, ಸಂಗ್ರಹಾಲಯಕ್ಕೆ ಹೋದರೆ ನೀವು ಅಲ್ಲಿ ಪ್ರದರ್ಶಿಸಿರುವ ಆಹಾರ ತಿನ್ನಲು ಉತ್ಸುಕರಾಗಿರುತ್ತೀರಿ. ಆದರೆ ಸ್ವೀಡನ್‌ನಲ್ಲಿ ಅ.31ರಂದು ಆರಂಭವಾಗಲಿರುವ ಆಹಾರ ಪ್ರದರ್ಶನಾಲಯದಲ್ಲಿ ಖಂಡಿತಾ ನೀವು ಆಹಾರದ ರುಚಿ ನೋಡಲು ಮುಂದಾಗುವುದಿಲ್ಲ.

ಏಕೆಂದರೆ ನಿಮಗೆ ಅಲ್ಲಿ ಪ್ರದರ್ಶಿತವಾಗಲಿರುವ ಆಹಾರಗಳನ್ನು ನೋಡುತ್ತಲೇ ಅಸಹ್ಯವಾಗಬಹುದು. ಇದು ಅಸಹ್ಯವೆನಿಸುವ ಆಹಾರಗಳನ್ನು ಪ್ರದರ್ಶಿಸಲೆಂದೇ ತೆರೆಯಲಾಗುತ್ತಿರುವ ಸಂಗ್ರಹಾಲಯ. ಪ್ರಪಂಚದಾದ್ಯಂತ ಅಸಹ್ಯವೆನಿಸುವ ಆಹಾರಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು. ಆಗ್ನೇಯ ಏಷ್ಯಾದ ಗಬ್ಬು ನಾರುವ ಡುರೈನ್‌ ಹಣ್ಣು, ಐಸ್‌ಲ್ಯಾಂಡ್‌ನ‌ ಕೊಳೆತ ಶಾರ್ಕ್‌ ಖಾದ್ಯ, ಚೀನಾದ ವಾಸನೆಯುಕ್ತ ಟೋಫ‌ು ಮುಂತಾದ ಖಾದ್ಯಗಳು ಸೇರಿ ಸದ್ಯ 80 ಖಾದ್ಯಗಳನ್ನು ಸದ್ಯ ಪ್ರದರ್ಶನದಲ್ಲಿರಿಸಲಾಗುತ್ತದೆ ಎಂದು ವಸ್ತು
ಸಂಗ್ರಹಾಲಯದ ನಿರ್ವಾಹಕರು ಹೇಳಿದ್ದಾರೆ.


Trending videos

Back to Top