ತನ್ನನ್ನು ತಾನೇ ಮದುವೆಯಾದ ಮಹಿಳೆ
Team Udayavani, Oct 11, 2018, 4:44 AM IST
ಪೋಷಕರ ಒತ್ತಡಕ್ಕೆ ಮಣಿದು ಅವರು ತೋರಿಸಿದಹುಡುಗನ ಜೊತೆ ಮದುವೆಯಾಗುವ ನಿರ್ಧಾರವನ್ನು ಹೆಚ್ಚಿನ ಹುಡುಗಿಯರು ತೆಗೆದುಕೊಳ್ಳುತ್ತಾರೆ. ಆಕ್ಸ್ಫರ್ಡ್ ವಿದ್ಯಾರ್ಥಿನಿಯಾಗಿ ರುವ ಉಗಾಂಡ ಮೂಲದ ಮಹಿಳೆ ಲುಲು ಜೆಮಿಮ್ಹಾ(32) ಕೂಡ ಪೋಷಕರ ಒತ್ತಡದಿಂದ ಮುಕ್ತಿಪಡೆಯಲು ಮದುವೆಯಾಗಿದ್ದಾರೆ. ಆದರೆ ಇವರು ಮದುವೆಯಾಗಿರುವುದು ಪೋಷಕರು ತೋರಿಸಿದ ಹುಡುಗನನ್ನಲ್ಲ. ಬದಲಾಗಿ ಅವರನ್ನು ಅವರೇ ಮದುವೆಯಾಗಿದ್ದಾರೆ. ಇತ್ತೀ ಚೆ ಗೆ ಇವರ ಮದುವೆ ಸಮಾರಂಭ ನಡೆದಿದೆ. ತಾನು 16ನೇ ವಯಸ್ಸಿನಲ್ಲಿದ್ದಾಗಿನಿಂದ ನನ್ನ ಪೋಷಕರು, ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಹುಡುಗ ಸಿಗಬೇಕು, ನಾನು ಅವನನ್ನು ಮದುವೆಯಾಗಬೇಕು ಎಂದು ಬಯಸಿದ್ದರು. ನನ್ನನ್ನು ತುಂಬಾ ಪ್ರೀತಿಸುವ ವ್ಯಕ್ತಿ ನಾನೇ. ಆದ್ದರಿಂದ ನನ್ನನ್ನು ನಾನೇ ಮದುವೆಯಾಗಿದ್ದೇನೆ. ಇದೊಂದು ರೀತಿಯ ತಮಾಷೆ ಕೆಲಸವೂ ಹೌದು ಎಂದು ಲುಲು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ