CONNECT WITH US  

ಹನಿಮೂನ್‌ಗೆ ಹೋದವರು ಹೊಟೇಲ್‌ ಖರೀದಿಸಿದರು

ಗುಂಡು ಹಾಕಿ ಮತ್ತು ಏರಿದ ಮೇಲೆ ಹೆಚ್ಚಿನ ಸಂದರ್ಭಗಳಲ್ಲಿ ಉಂಟಾಗುವುದು ಅನಾಹುತ. ಆದರೆ ಯುನೈಟೆಡ್‌ ಕಿಂಗ್‌ಡಮ್‌ನ ಯುವ ಜೋಡಿ ಪ್ರಕರಣದಲ್ಲಿ ಉಲ್ಟಾ ಆಗಿದೆ.

ಮದುವೆ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಿ ಮಧುಚಂದ್ರಕ್ಕೆಂದು ಯು.ಕೆ.ಯ ಗಿನಾ ಮತ್ತು ಮಾರ್ಕ್‌ ಶ್ರಿಲಂಕಾಕ್ಕೆ ತೆರಳಿದ್ದರು. ಅಲ್ಲಿಯ ಹೊಟೇಲ್‌ ಒಂದರಲ್ಲಿ ತಂಗಿದ್ದರು. ಸಮುದ್ರದ ಬದಿಯಲ್ಲಿ ಕುಳಿತು ಪತಿ-ಪತ್ನಿ ರಮ್‌ ಏರಿಸುತ್ತಾ ಇದ್ದರು. ಗಿನಾ ಮತ್ತು ಮಾರ್ಕ್‌ಗೆ ತಾವು ವಾಸ್ತವ್ಯ ಹೂಡಿದ್ದ ಹೊಟೇಲ್‌ ಖರೀದಿಸಿದರೆ ಹೇಗೆ ಎಂಬ ಐಡಿಯಾ ಬಂತು. ಅವರ ಅದೃಷ್ಟವೋ ಏನೋ ಗೊತ್ತಿಲ್ಲ. ಅದಕ್ಕೆ ನೀಡಲಾಗಿದ್ದ ಲೀಸ್‌ ಅವಧಿ ಕೂಡ ಮುಕ್ತಾಯವಾಗುತ್ತಾ ಬಂದಿತ್ತು. 29 ಲಕ್ಷ ರೂ. ನೀಡುವ ಮೂಲಕ ಹೊಟೇಲ್‌ ಲೀಸ್‌ ಸಿಗುತ್ತದೆ ಎಂಬ ವಿಚಾರವೂ ಗೊತ್ತಾಯಿತು ಯುವ ದಂಪತಿಗೆ. ಹಾಗೆ, ಅದರ ಮಾಲೀಕತ್ವ ಹೊಂದಿದ್ದ ವೃದ್ಧ ದಂಪತಿ ಜತೆಗೆ ಮಾತುಕತೆ ನಡೆಸಿದರು. ಅಂತಿಮವಾಗಿ ಮೂರು ವರ್ಷಗಳ ಅವಧಿಯ ಲೀಸ್‌ ಮೊತ್ತ 29 ಲಕ್ಷ ರೂ. (30,000 ಪೌಂಡ್‌)ಕ್ಕೆ ವ್ಯವಹಾರ ಕುದುರಿತು. ಕೆಲವೊಮ್ಮೆ ಎಣ್ಣೆಯ ಪವರ್‌ ಕೂಡ ಡೀಲ್‌ ಕುದುರಿಸುತ್ತದೆ. ಎಲ್ಲಾ ಸಂದರ್ಭದಲ್ಲಿ ಅಲ್ಲ.


Trending videos

Back to Top