ಕಾರ್ನ್ ಮಾರಾಟದ ನಡುವೆ ಹಾಡಿನ ಟ್ಯೂನ್
Team Udayavani, Oct 15, 2018, 5:33 AM IST
“ವಡಾ ಪಾವ್, ಮಂಡಕ್ಕಿ, ಖಾರ ಮಂಡಕ್ಕಿ, ಹತ್ರುಪಾಯಿ, ಇಪ್ಪತ್ರುಪಾಯಿ’ ಎಂದು ಆಕರ್ಷಕವಾಗಿ ಕೂಗುತ್ತಾ ಚಾಟ್ಸ್ ಮಾರಾಟ ಮಾಡುತ್ತಾರೆ. ಕೆಲವರಿಗೆ ಅದು ಉತ್ತಮ ಲಾಭವನ್ನೂ ತರುತ್ತದೆ. ಕೊಯಮತ್ತೂರಿನಲ್ಲಿ ಥರಹೇವಾರಿ ರುಚಿಯ ಬಿಸಿ ಜೋಳದ ಕಾಳು (ಕಾರ್ನ್) ಮಾರುವ ವ್ಯಕ್ತಿಯದ್ದು ವಿಶೇಷತೆ ಇದೆ.
ಬೇರೆ ಬೇರೆ ಫ್ಲೇವರ್ಗಳ ಕಾರ್ನ್ ಅಗತ್ಯವಾಗಿದ್ದರೆ, ಅದನ್ನು ಬೆರೆಸುವ ಸಂದರ್ಭದಲ್ಲಿ ಜನಪ್ರಿಯ ಹಾಡುಗಳ ಟ್ಯೂನ್ಗಳನ್ನು ಬಾರಿಸುತ್ತಾರೆ. ಕಾರ್ನ್ ಮತ್ತು ಇತರ ಫ್ಲೇವರ್ಗಳನ್ನು ಹಾಕಿದ ಬಳಿಕ ಪಾತ್ರೆಯೊಳಗೆ ಸೌಟು ಹಾಕಿ ತಿರುಗಿಸುವಾಗ ಹಾಡುಗಳ ಟ್ಯೂನ್ಗಳನ್ನು ನುಡಿಸುವುದೇ ಅವರ ಹೆಗ್ಗಳಿಕೆ. ಕೊಯಮತ್ತೂರಿನ ಬ್ರೂಕ್ಸ್ ಫೀಲ್ಡ್ ಮಾಲ್ ಬಳಿ ಅವರು ಕಾರ್ನ್ ಮಾರುತ್ತಾರೆ. ಈ ವಿಶೇಷ ವೀಡಿಯೋವನ್ನು ಕಾರ್ತಿಕ್ ಎಂಬವರು ಟ್ವೀಟ್ ಮಾಡಿದ್ದಾರೆ. ಕೆಲಸದಲ್ಲಿ ಏಕತಾನತೆ ತಪ್ಪಿಸಲು ಮತ್ತು ನಿಮ್ಮನ್ನು ಗುರುತಿಸಲು ಅದು ಅನುಕೂಲವಾಗುತ್ತದೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರಲೂ ಇದು ಅನುಕೂಲ ಎನ್ನುವುದು ಆ ವ್ಯಕ್ತಿಯ ಮಾತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ