ಜೇಡ ಸುಡಲು ಹೋಗಿ ಮನೆಯನ್ನೇ ಸುಟ್ಟ
Team Udayavani, Oct 26, 2018, 4:48 AM IST
“ಗುಡ್ಡ ಅಗೆದು ಇಲಿ ಹಿಡಿದರು’ ಎಂಬುದು ನಮ್ಮಲ್ಲಿಯ ಒಂದು ಪ್ರಸಿದ್ಧ ಗಾದೆ. ಕ್ಯಾಲಿಫೋರ್ನಿಯಾದಲ್ಲಿ ಬಹುಶಃ ಇನ್ನು ಮುಂದೆ “ಜೇಡ ಸಾಯಿಸಲು ಹೋಗಿ ಮನೆಯನ್ನು ಸುಟ್ಟ’ ಎಂದು ಗಾದೆ ರಚಿಸಬಹುದೇನೋ? ಏಕೆಂದರೆ ಇಲ್ಲಿಯ ಫ್ರೆನ್ಸ್ಕೊದಲ್ಲಿ ವ್ಯಕ್ತಿಯೊಬ್ಬ ಆತನ ಪೋಷಕರ ಮನೆಯಲ್ಲಿದ್ದ ಒಂದು ಜಾತಿಯ ಜೇಡವನ್ನು ಸುಟ್ಟು ಸಾಯಿಸಲು ಹೋಗಿ, ಇಡೀ ಮನೆಯನ್ನೇ ಬೆಂಕಿಗಾಹುತಿ ಮಾಡಿದ್ದಾನೆ.
ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಅನಾಹುತದಿಂದ ಪಾರಾಗಿದ್ದಾರೆ. ಆತ ಬ್ಲೋಟಾರ್ಚ್ ಹಿಡಿದು ಜೇಡವನ್ನು ಕೊಲ್ಲಲು ಪ್ರಯತಿಸುತ್ತಿದ್ದ. ಟಾರ್ಚ್ನಿಂದ ಬೆಂಕಿ ಹೊರಬರುತ್ತಲೇ ಮನೆ ನಿರ್ಮಾಣದಲ್ಲಿ ಬಳಕೆಯಾಗಿದ್ದ
ಸುಲಭವಾಗಿ ಹೊತ್ತಿ ಉರಿಯುವ ವಸ್ತುಗಳಿಗೆ ಬೆಂಕಿ ಹತ್ತಿಕೊಂಡಿದೆ. ಈ ಬೆಂಕಿ ವ್ಯಾಪಿಸುತ್ತಾ ಸಾಗಿ, ಸಂಪೂರ್ಣ
ಮನೆಯನ್ನು ಆಹುತಿ ಪಡೆದುಕೊಂಡಿದೆ.