ಸಂಚಾರ ನಿಯಮಕ್ಕೆ ಹ್ಯಾರಿ ಪಾಟರ್ ಸ್ಫೂರ್ತಿ
Team Udayavani, Oct 27, 2018, 5:50 AM IST
ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ನಿಯಮಗಳ ಪಾಲನೆ ಮಾಡಲು ಹಲವು ರೀತಿಯ ಆಕರ್ಷಕ ಕ್ರಮಗಳನ್ನು ಕೈಗೊಳ್ಳುತ್ತಾರೆ. ಕೆಲ ಸಮಯದ ಹಿಂದೆ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ ಪ್ರಮುಖ ಜಂಕ್ಷನ್ಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನೇ ಹೋಲುವ ಕಟೌಟ್ಗಳನ್ನು ನಿಲ್ಲಿಸಿ ನಿಯಮ ಉಲ್ಲಂ ಸುವವರಿಗೆ ಎಚ್ಚರಿಕೆ ಮೂಡಿಸಿದ್ದು ಎಲ್ಲರ ಮೆಚ್ಚುಗೆ ಪಡೆದಿತ್ತು. ಇದೀಗ ಮುಂಬೈ ಪೊಲೀಸರು ವಿನೂತನವಾಗಿರುವ ಕ್ರಮಕ್ಕೆ ಮುಂದಾಗಿದ್ದಾರೆ. ವಿಶ್ವ ವಿಖ್ಯಾತವಾಗಿರುವ ಹ್ಯಾರಿ ಪಾಟರ್ ಅನ್ನು ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ. “ನಾವೆಲ್ಲರೂ ಮನುಷ್ಯರು ಅಲ್ಲವೇ? ಹೀಗಾಗಿ ಪ್ರತಿ ಮಾನವ ಜೀವವೂ ಕೂಡ ಅಮೂಲ್ಯವಾದದ್ದು. ಹೀಗಾಗಿ ಅದನ್ನು ಕಾಪಡಬೇಕಲ್ಲವೇ’? ಎಂದು ಬರೆಯಲಾಗಿದೆ.
“ಅಸುನೀಗಲು ರಸ್ತೆ ಗುಂಡಿಗಳೇ ಆಗಬೇಕಾಗಿಲ್ಲ. ಸರಳ ನಿಯಮ ಪಾಲನೆ ಮಾಡದೇ ಇದ್ದರೂ ಅಪಾಯವೇ. ಅದನ್ನು ತಪ್ಪಿಸಲು ಸಂಚಾರ ನಿಯಮ ಪಾಲನೆ ಒಳಿತಲ್ಲವೇ’ ಎಂದು ನಯವಾಗಿ ಮುಂಬೈ ಕರ್ಗಳಿಗೆ ಎಚ್ಚರಿಕೆ ನೀಡುವ ವಾಕ್ಯಗಳನ್ನು ಬರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅದನ್ನು ಅಪ್ಲೋಡ್ ಮಾಡಿದ್ದೇ ತಡ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಗೂ ಪಾತ್ರವಾಗಿದೆ.