CONNECT WITH US  

ಜೇಡರ ಹುಳು ಪಲ್ಯ,ಇಲಿಗಳ ವೈನ್‌ ಬೇಕಾ?

ನೀವು ಪ್ರವಾಸಿಗಳಾಗಿದ್ದರೆ, ಹೋದಲ್ಲಿ ಬಂದಲ್ಲಿ ಅಲ್ಲಿನ ರುಚಿರುಚಿಯಾದ ಸ್ಥಳೀಯ ಖಾದ್ಯಗಳನ್ನು ತಿನ್ನಬಯಸುವವರಾಗಿದ್ದರೆ, ಅದರಲ್ಲೂ ನಾನ್‌ವೆಜ್‌ ಪ್ರಿಯರಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಆದರೆ, ಸ್ವಲ್ಪ ಸಾವಧಾನ.

ಸಾಂಪ್ರದಾಯಿಕ ಆಹಾರ ಬಿಟ್ಟು ಬೇರೇನನ್ನೂ ತಿನ್ನೆನು ಎಂಬುವರು ಖಂಡಿತ ಇಲ್ಲಿಂದ ಮುಂದೆ ಓದಬೇಡಿ. ಏಕೆಂದರೆ, ಇಲ್ಲಿ ಹೇಳ ಹೊರಟಿರುವುದು ಸ್ವೀಡನ್‌ನ "ಡಿಸYಸ್ಟಿಂಗ್‌ ಫ‌ುಡ್‌ ಮ್ಯೂಸಿಯಂ' ಬಗ್ಗೆ. ಅಲ್ಲಿ ನಿಮಗೆ ತಿನ್ನಲು ಏನು ಸಿಗುತ್ತೆ ಗೊತ್ತಾ? ಸತ್ತ ಇಲಿಗಳಿಂದ ತಯಾರಿಸಿದ ವೈನ್‌, ಎತ್ತುಗಳ ಜನನೇಂದ್ರಿಯದ ಫ್ರೈ, ದೈತ್ಯ ಜೇಡರಹುಳುಗಳ ಪಲ್ಯ ಮುಂತಾದ ಐಟಂ ಸಿಗುತ್ತವೆ. ಕಾಂಟಿನೆಂಟಲ್‌ ಫ‌ುಡ್‌ ಅಡಿಯಲ್ಲಿ ಥಾಯ್ಲೆಂಡ್‌ ಮೂಲದ ಕೊಳೆತು ನಾರುವ ಹಲಸಿನ ಸೀಕರಣೆ, ಪೆರುವಿನ ಗಿನಿ ಪಿಗ್ಸ್‌ಗಳ ಸಾರು, ಸಾರ್ಡಿನಾ ದೇಶದ ಹುಳ ಬಿದ್ದ ಚೀಸ್‌ ಮುಂತಾದವು ಸಿಗುತ್ತವೆ.

ಛೀ... ಯಾರಾದ್ರೂ ಇಂಥಾವು ತಿಂದ್ರೆ ಬದುಕ್ತಾರೇನ್ರೀ ಅಂತ ನೀವು ಕೇಳಬಹುದು. ಅದು ತಿಂದವರ ಹಣೆಬರಹ ಎನ್ನಬಹುದಷ್ಟೆ

Trending videos

Back to Top