ತಲೆಕೂದಲು ಕತ್ತರಿಸಿ ಮೇಕಪ್ ಬ್ರಷ್ ತಯಾರಿಸಿದಳು
Team Udayavani, Nov 4, 2018, 6:28 AM IST
ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಮೇಕಪ್ ಟ್ಯುಟೋರಿಯಲ್ಗಳದ್ದೇ ಹಾವಳಿ. ಕೆಲವೊಂದು ಟ್ಯುಟೋರಿಯಲ್ಗಳನ್ನು ಜನರು ಮೆಚ್ಚುತ್ತಾರಾದರೂ ಕೆಲ ಟ್ಯುಟೋರಿಯಲ್ಗಳು ಜನರಿಗೆ ತಮಾಷೆಯ ಸರಕಾಗಿ ಕಾಣುತ್ತವೆ. ಇತ್ತೀಚೆಗೆ “ಫೈವ್ ಮಿನ್ಯುಟ್ಸ್ ಕ್ರಾಫ್ಟ್ ಎಂಬ ಪೇಜ್ ಒಂದು ತಾವೇ ಪ್ರಯತ್ನಿಸಬಹುದಾದಂಥ ಒಂದು ವಿಡಿಯೋವನ್ನು ಹರಿಬಿಟ್ಟಿದೆ.
ಈ ವೀಡಿಯೋ ಜಾಲತಾಣಿಗರಿಂದ ಅತೀ ತಮಾಷೆಯ ಮೇಕಪ್ ವೀಡಿಯೋ ಎಂಬ ಗೇಲಿಗೆ ಒಳಗಾಗಿದೆ. ಮಹಿಳೆಯೊಬ್ಬರು ಪುಟ್ಟದಾದ ಮೇಕಪ್ ಬ್ರಷ್ ತಯಾರಿಸಲು ತಮ್ಮ ಉದ್ದನೆಯ ಕೂದಲನ್ನು ಕತ್ತರಿಸುತ್ತಾರೆ. ಅದರಲ್ಲಿ ಸ್ವಲ್ಪ ಪ್ರಮಾಣದ ಕೂದಲನ್ನು ಪೆನ್ಸಿಲ್ನ ಹಿಂದೆ ಅಂಟಿಸಿ ಬ್ರಷ್ ತಯಾರಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ವಸ್ತುವಿಗೆ ಅಷ್ಟುದ್ದ ಕೂದಲು ಕತ್ತರಿಸುವ ಅಗತ್ಯವೇನಿತ್ತು ಎಂದು ಜನ ಕುಹಕವಾಡಿದ್ದಾರೆ.