ಚೀನಾದಲ್ಲಿ ಪಾಕ್ ಪ್ರಧಾನಿ “ಬೆಗ್ಗಿಂಗ್’!
Team Udayavani, Nov 6, 2018, 5:25 AM IST
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಚೀನಾ ಪ್ರವಾಸದಲ್ಲಿರುವ ವೇಳೆ ಪಾಕಿಸ್ತಾನಿ ವಾಹಿನಿಯೊಂದು ಅವರಿಗೆ ಸಾಕಷ್ಟು ಮುಜುಗರ ಉಂಟು ಮಾಡಿದೆ.
ಇಮ್ರಾನ್ ಖಾನ್ ಚೀನಾದ ಬೀಜಿಂಗ್ನ ಶಾಲೆ ಯೊಂದರಲ್ಲಿ ಭಾಷಣ ಮಾಡುತ್ತಿರುವುದನ್ನು ನೇರ ಪ್ರಸಾರ ಮಾಡಿರುವ ಪಾಕಿಸ್ತಾನ ಟೆಲಿವಿಷನ್ ಕಾರ್ಪೊರೇಷನ್(ಪಿಟಿವಿ)ಬೀಜಿಂಗ್ನಿಂದ ನೇರ ಪ್ರಸಾರ ಎಂದು ನಮೂದಿಸುವ ಕಡೆ “ಬೀಜಿಂಗ್’ ಬದಲು “ಬೆಗ್ಗಿಂಗ್ ‘(ಭಿಕ್ಷಾಟನೆ) ಎಂದು ನಮೂದಿಸಿದೆ. ಇದಿಷ್ಟೇ ಆಗಿದ್ದರೆ ಏನೂ ಸಮಸ್ಯೆ ಇರುತ್ತಿರಲಿಲ್ಲವೇನೊ? ಆದರೆ ಅದೇ ವೇಳೆ ಇಮ್ರಾನ್ ಚೀನಾ ಬಳಿ ಆರ್ಥಿಕ ನೆರವು ಕೋರಿದ್ದಾರೆ ಎಂದು ಕೂಡಾ ಟೀವಿಯಲ್ಲಿ ಹೇಳಲಾಗಿದೆ. ಇದನ್ನೇ ಮುಖ್ಯವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಿಗರು ಇಮ್ರಾನ್ ಅವರು ಚೀನಾದಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಗೇಲಿ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು