CONNECT WITH US  

ಚಾಲಕನಿಲ್ಲದೆ 92 ಕಿಲೋ ಮೀ.ಸಾಗಿದ ಗೂಡ್ಸ್‌ ರೈಲು!

ಪರ್ತ್‌: ಭಾರತದಲ್ಲಿ ಚಾಲಕನಿಲ್ಲದೆ ರೈಲಿನ ಇಂಜಿನ್‌ ಹಾಗೂ ಬೋಗಿಗಳು ಒಂದಷ್ಟು ದೂರ ಸಾಗಿ ಹಿಂದೆ ಒಂದೆರಡು ಬಾರಿ ಅನಾಹುತವಾಗಿದೆ. ಆದರೆ ಇದೇ ರೀತಿಯ ಸನ್ನಿವೇಶ ಆಸ್ಟ್ರೇಲಿಯಾದಲ್ಲೂ ನಡೆದಿದೆ.

ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬರಾದಲ್ಲಿ ಕಬ್ಬಿಣದ ಅದಿರನ್ನು ಹೊತ್ತ ರೈಲನ್ನು ನಿಲ್ಲಿಸಿಕೊಂಡು ಡ್ರೈವರ್‌ ಏನೋ ಸಣ್ಣ ರಿಪೇರಿ ಮಾಡುತ್ತಿದ್ದ. ಆದರೆ ರೈಲು ಒಂದೇ ಸಮನೆ ಚಲಿಸಲು ಶುರು ಮಾಡಿಬಿಟ್ಟಿದೆ. ನಾಲ್ಕು ಲೊಕೊಮೋಟಿವ್‌ ಹಾಗೂ 268 ವ್ಯಾಗನ್‌ಗಳನ್ನು ಇದು ಹೊಂದಿತ್ತು. ಹೀಗೆ ಹೊರಟ ರೈಲು ಪೋರ್ಟ್‌ ಹೆಡ್‌ಲ್ಯಾಂಡ್‌ವರೆಗೂ ತಲುಪಿದೆ. ಅಲ್ಲಿಯೂ ನಿಲ್ಲುವ ಸಾಧ್ಯತೆ ಇಲ್ಲದ್ದರಿಂದ, ಪೋರ್ಟ್‌ ಹೆಡ್‌ಲ್ಯಾಂಡ್‌ನ‌ಲ್ಲಿ ಉದ್ದೇಶಪೂರ್ವಕವಾಗಿ ಹಳಿ ತಪ್ಪಿಸಲಾಗಿದೆ. 

ಈ ರೈಲನ್ನು ಬಿಎಚ್‌ಪಿ ಬಿಲ್ಲಿಟನ್‌ ಎಂಬ ಖಾಸಗಿ ಕಂಪನಿ ನಿರ್ವಹಿಸುತ್ತಿತ್ತು. ಕಬ್ಬಿಣದ ಅದಿರು ವಹಿವಾಟು ನಡೆಸುವ ಕಂಪೆ‌ನಿಗಳು ಆಸ್ಟ್ರೇಲಿಯಾದಲ್ಲಿ ರೈಲು ನಿರ್ವಹಣೆ ಮಾಡುತ್ತವೆ. ಇದೇ ರೀತಿ, 1 ಸಾವಿರ ಕಿ.ಮೀ. ರೈಲುಮಾರ್ಗವನ್ನು ಬಿಎಚ್‌ಪಿ ಬಿಲ್ಲಿಟನ್‌ ತನ್ನ ಕಬ್ಬಿಣದ ಅದಿರು ಸಾಗಾಟಕ್ಕಾಗಿ ನಿರ್ವಹಿಸುತ್ತದೆ. ಪೋರ್ಟ್‌ ಹೆಡ್‌ಲ್ಯಾಂಡ್‌ನಿಂದ ಜಪಾನ್‌ ಹಾಗೂ ಚೀನಾಗೆ ಕಬ್ಬಿಣದ ಅದಿರು ಸಾಗಿಸಲಾಗುತ್ತದೆ. ಇಡೀ ವಿಶ್ವಕ್ಕೆ ಬಿಎಚ್‌ಪಿ ಶೇ.20ರಷ್ಟು ಕಬ್ಬಿಣದ ಅದಿರು ಸಾಗಿಸುತ್ತದೆ. ರೈಲು ಹಳಿಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಕೆಲವು ದಿನಗಳವರೆಗೆ ಸಾಗಣೆಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. 

Trending videos

Back to Top