ಅಡ್ಡವಾಗಿ ಬಂದವನನ್ನು ಕಾರಿನ ಮೇಲೆ ಹತ್ತಿಸಿ ತಿರುಗಿದ!
Team Udayavani, Nov 11, 2018, 6:39 AM IST
30ರ ಪ್ರಾಯದ ಭುವನ್ ಕುಮಾರ್ ಶರ್ಮಾ ಎಂಬ ವಕೀಲ ತನ್ನ ಕಾರಿಗೆ ಅಡ್ಡವಾಗಿ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾರು ಹತ್ತಿಸಲು ಹೋಗಿದ್ದು, ಆತ ಕಾರಿನ ಬಾನೆಟ್ ಮೇಲೆ ಜಿಗಿದು ಕಾರಿನ ಮೇಲ್ಛಾವಣಿ ಮೇಲೆ ಮಲಗಿದಾಗ ಆತನನ್ನು ಆ ವಕೀಲ ಊರೆಲ್ಲಾ ರೌಂಡ್ ಹೊಡೆಸಿರುವ ಘಟನೆ ಗಾಜಿಯಾಬಾದ್ ನಲ್ಲಿ ಗುರುವಾರ ಸಂಜೆ ನಡೆದಿದೆ.
ಕಾರಿನ ಮುಂದಿನ ಗಾಜಿನ ಮೇಲಿಂದ ಮೇಲ್ಛಾವಣಿವರೆಗೂ ಮಲಗಿ ಎರಡೂ ಕೈಗಳಿಂದ ಕಾರಿನ ಕಿಟಕಿಗಳನ್ನು ಹಿಡಿದುಕೊಂಡು ಚೀರುತ್ತಿದ್ದ ರಾಜೇಶ್ನನ್ನು ದಾರಿಹೋಕರು ವಿಡಿಯೋ ಮಾಡಿದ್ದಾರೆ. ಗುರುವಾರ ಸಂಜೆ ರಾಜೇಶ್ ಕಾರಿಗೆ ಶರ್ಮಾ ಕಾರು ಆಕಸ್ಮಿಕವಾಗಿ ಡಿಕ್ಕಿಯಾಗಿದೆ.
ಘಟನೆ ತಿಳಿದ ಕೂಡಲೇ ಶರ್ಮಾ ಅಲ್ಲಿಂದ ಓಡಲು ಯತ್ನಿಸಿದಾಗ ರಾಜೇಶ್ ಅಡ್ಡ ಬಂದಿದ್ದಕ್ಕೆ ಸಿಟ್ಟಿಗೆದ್ದ ಶರ್ಮಾ, ರಾಜೇಶ್ ಅವರ ಮೇಲೆ ಕಾರು ಹತ್ತಿಸಲು ಹೋಗಿ ಅವರನ್ನು ಹೀಗೆ ಊರೆಲ್ಲಾ ಮೆರವಣಿಗೆ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ