ಯುಕೆ 2000 ಮನೆಗಳಲ್ಲಿವೆ ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿ
Team Udayavani, Nov 12, 2018, 6:49 AM IST
ನಿಮ್ಮ ಮನೆಯಲ್ಲಿ ಯಾವ ಟೀವಿ? ಕಲರಾ, ಬ್ಲ್ಯಾಕ್ ಆ್ಯಂಡ್ ವೈಟಾ ಎಂದು ಕೇಳುವ ಕಾಲ ಇತ್ತು. ಈಗ ಕಪ್ಪು ಬಿಳುಪು ಟಿವಿ ಇತ್ತೇ ಎಂಬ ಕಾಲ ಬಂದಿರುವ ಸಂದರ್ಭದಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ. ಒಂದು ಅಧ್ಯಯನದ ಪ್ರಕಾರ ಯು.ಕೆ.ಯಲ್ಲಿ ಸುಮಾರು 7 ಸಾವಿರ ಮಂದಿ ಇನ್ನೂ ಕಪ್ಪು-ಬಿಳುಪು ಟಿವಿ ವೀಕ್ಷಣೆ ಮಾಡುತ್ತಿದ್ದಾರಂತೆ.
ಮೊಬೈಲ್ಗಳಲ್ಲಿಯೂ ಟಿವಿ ನೋಡಲು ಸಾಧ್ಯವಾಗುವ ತಂತ್ರಜ್ಞಾನವಿದ್ದರೂ ಅವರು ಹಳೆಯ ಟಿವಿಯನ್ನೇ ನೆಚ್ಚಿಕೊಂಡಿದ್ದಾರೆ ಎಂದು ಟಿವಿ ಪರವಾನಗಿ ಪ್ರಾಧಿಕಾರದ ಅಧ್ಯಯದಲ್ಲಿ ತಿಳಿದು ಬಂದಿದೆ. ಯು.ಕೆ.ಯ ಅರ್ಧದಷ್ಟು ಮನೆಗಳ ಟಿವಿಗಳಿಗೆ ಇಂಟರ್ನೆಟ್ ಸಂಪರ್ಕವಿದೆ. ಇದರ
ಹೊರತಾಗಿಯೂ ಹಳೆಯ ಟಿವಿ ಇದೆಯಂತೆ.
2 ಸಾವಿರನೇ ಇಸ್ವಿಯಲ್ಲಿ 2,12,000 ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿಗಳಿದ್ದರೆ, 2003ರಲ್ಲಿ ಅದರ ಸಂಖ್ಯೆ 93 ಸಾವಿರ, 2015ರ ವೇಳೆಗೆ 10 ಸಾವಿರಕ್ಕಿಂತ ಕೆಳಗೆ ಇಳಿಯಿತು. ಮತ್ತೂಂದು ವಿಚಾರವೂ ಈಗ ಬಹಿರಂಗವಾಗಿದೆ. 18-25 ವರ್ಷ ವಯೋಮಿತಿಯ 26 ಸಾವಿರ ಮಂದಿ ಟ್ಯಾಬ್ಲೆಟ್, ಮೊಬೈಲ್ ಮತ್ತು ಪರ್ಸನಲ್ ಕಂಪ್ಯೂಟರ್ಗಳಲ್ಲಿ ಬಿಬಿಸಿಯ ಕಾರ್ಯಕ್ರಮಗಳನ್ನು
ವೀಕ್ಷಿಸಲು ಯಾವುದೇ ಪರವಾನಗಿ ಪಡೆದೆಕೊಂಡಿಲ್ಲವಂತೆ.