ಬಾತ್ಟಬ್ನಲ್ಲಿ ನಾಣ್ಯಗಳ ಒಯ್ದು ಐಫೋನ್ ಕೊಂಡ
Team Udayavani, Nov 16, 2018, 6:25 AM IST
ನಿಮ್ಮ ಬಳಿ ಒಂದು ಆ್ಯಪಲ್ ಐಫೋನ್ ಇಲ್ಲದಿದ್ದರೆ ನೀವು ಬದುಕಿನಲ್ಲಿ ಏನನ್ನಾದರೂ ಕಳೆದುಕೊಳ್ಳುತ್ತೀರಾ? ಖಂಡಿಯಾ ಇಲ್ಲ ಅಲ್ವಾ. ಆದರೆ, ತಮ್ಮ ಬಳಿ ಐಫೋನ್ ಇಲ್ಲದಿದ್ದರೆ ಪ್ರಪಂಚ ನಡೆಯುವುದೇ ಇಲ್ಲ ಎಂದು ತಿಳಿದುಕೊಂಡವರಿಗೇನೂ ಬರವಿಲ್ಲ.
ಇಂಥ ವ್ಯಕ್ತಿಯೊಬ್ಬ ರಷ್ಯಾದ ಮಾಸ್ಕೋದಲ್ಲಿದ್ದಾನೆ. ಐಫೋನ್ ಕೊಳ್ಳಲು ಆತ ವಿಚಿತ್ರ ಮಾರ್ಗವನ್ನು ಅನುಸರಿಸಿದ್ದಾನೆ. 1,08,000 ರೂ.ಗಳಷ್ಟು ನಾಣ್ಯವನ್ನು ಒಟ್ಟು ಮಾಡಿ, ಒಂದು ಬಾತ್ ಟಬ್ನಲ್ಲಿ ತುಂಬಿಕೊಂಡು ಐಫೋನ್ ಮಳಿಗೆಗೆ ಹೊತ್ತೂಯ್ದಿದ್ದಾನೆ. ಮತ್ತೂಂದು ವಿಶೇಷವೆಂದರೆ, ಇಷ್ಟೊಂದು ನಾಣ್ಯಗಳನ್ನು ಅಂಗಡಿಯಾತ ತಾಳ್ಮೆಯಿಂದ ಎಣಿಸಿ ಆತನಿಗೆ ಐಫೋನ್ ನೀಡಿದ್ದಾನೆ. ವ್ಯಕ್ತಿ ನಾಣ್ಯಗಳನ್ನು ಟಬ್ನಲ್ಲಿ ತುಂಬುವುದರಿ ದಂದ ಹಿಡಿದು ಲಿಫ್ಟ್ನಲ್ಲಿ ಸಾಗಿಸುವವರೆಗೂ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.