ಮದುವೆ ಗೌನ್ ಸ್ಫೋಟಿಸಿ ವಿಚ್ಛೇದನ ಪಾರ್ಟಿ
Team Udayavani, Nov 17, 2018, 4:54 AM IST
ಹುಟ್ಟುಹಬ್ಬ,ವಿವಾಹ ವಾರ್ಷಿಕೋತ್ಸವಗಳಿಗೆ ಸಂಭ್ರಮಾ ಚರಣೆ ನಡೆಸುವಂತೆ ವಿಚ್ಛೇದನ ಪಡೆದಿದ್ದಕ್ಕೂ ಪಾರ್ಟಿ ಮಾಡುವ ಟ್ರೆಂಡ್ ಇತ್ತೀಚೆಗೆ ಪ್ರಸಿದ್ಧಿಯಾಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಅಮೆರಿಕದ 41 ವರ್ಷ ವಯಸ್ಸಿನ ಮಹಿಳೆ ಕಿಂಬರ್ಲಿ ತಮ್ಮ 14 ವರ್ಷಗಳ ವೈವಾಹಿಕ ಸಂಬಂಧವನ್ನು ಕೊನೆಗಾಣಿಸಿದ್ದನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ತಮ್ಮ ಮದುವೆ ಗೌನ್ನಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಿ ಅದನ್ನು ಸ್ಫೋಟಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ವಿನೂತನವಾಗಿ ತಮ್ಮ ವಿಚ್ಛೇದನ ಸಂಭ್ರಮಿಸಬೇಕು ಎಂದು ಅವರ ತಂದೆ ಮತ್ತು ಬಾವನಿಗೆ ಕೇಳಿದಾಗ ಅವರು ತಮ್ಮ ತೋಟದಲ್ಲಿ ಗೌನ್ ಅನ್ನು ಸ್ಫೋಟಿಸಲು ತಯಾರಿ ಮಾಡಿದರಂತೆ. ಸ್ಫೋಟದ ಸದ್ದು 15 ಮೈಲು ದೂರ ದವರೆಗೂ ಕೇಳಿಸಿತ್ತಂತೆ.