ಕಿಟಕಿ ಸೀಟು ಕೇಳಿದ ಪ್ರಯಾಣಿಕನಿಗೆ ಕಿಟಕಿ ನೀಡಿದ ಪರಿಚಾರಕಿ
Team Udayavani, Nov 19, 2018, 4:28 AM IST
ನಮಗೆ ಸರಿಹೊಂದದ ಸಹ ಪ್ರಯಾಣಿಕರು ಸಿಕ್ಕರೆ ನಮ್ಮ ಪ್ರಯಾಣ ನರಕ ಸದೃಶವಾಗುತ್ತದೆ. ಅಂಥಹದರಲ್ಲಿ ಕಿರಿಕಿರಿ ಮಾಡುವ ಪ್ರಯಾಣಿಕರನ್ನು ಸಂಭಾಳಿಸುವ ವಿಮಾನ ಪರಿಚಾರಕರ ಕಥೆ ಏನಾಗಬೇಡ? ಕಿರಿಕಿರಿ ಮಾಡುತ್ತಿದ್ದ ಪ್ರಯಾಣಿಕನನ್ನು ಸಮಾಧಾನಪಡಿಸಲು ಪರಿಚಾರಕಿ ಅನುಸರಿಸಿದ ಕ್ರಮದ ಬಗ್ಗೆ ನೀವು ಕೇಳಿದರೆ ಚಕಿತರಾಗುತ್ತೀರಿ. ಜಪಾನ್ನ ವಿಮಾನವೊಂದರಲ್ಲಿ ಈ ಘಟನೆ ನಡೆದಿದೆ.
ಪ್ರಯಾಣಿಕರೊಬ್ಬರು ಕಿಟಕಿ ಬದಿಯ ಸೀಟಿಗೆ ಬಂದು ಕುಳಿತರು. ಆದರೆ ಅವರು ಕುಳಿತ ಜಾಗದಲ್ಲಿ ಕಿಟಕಿ ಇರಲಿಲ್ಲ. ನಿರಾಶರಾದ ಅವರು, ಕಿಟಕಿ ಬದಿಯ ಬೇರೊಂದು ಸೀಟು ನೀಡಬೇಕು ಎಂದು ಕಿರಿಕಿರಿ ಮಾಡುತ್ತಿದ್ದರು. ಕಡೆಗೆ ಪರಿಚಾರಕಿ ಒಂದು ಹಾಳೆಯಲ್ಲಿ ಸಮುದ್ರ ಮತ್ತು ಮೋಡಗಳ ಚಿತ್ರ ಬರೆದು, ಅವರ ಸೀಟಿನ ಬಳಿ ಅಂಟಿಸಿ, ಇದೇ ನಿಮ್ಮ ಕಿಟಕಿ ಎಂದರು.