ಮನುಷ್ಯರಿಗೆ ಸದ್ಯದಲ್ಲೇ ಬರಲಿದೆ ಮೂರನೇ ಕೈ!
Team Udayavani, Dec 4, 2018, 4:59 AM IST
ಪ್ರತಿದಿನ ಬೆಳಗ್ಗೆ ಮಕ್ಕಳನ್ನು ಶಾಲೆಗೆ ತಯಾರು ಮಾಡುವುದರ ಜತೆಗೆ ಅವರಿಗೆ ಊಟವನ್ನೂ ತಿನ್ನಿಸುವ ಸವಾಲು ಎದುರಿಸುವ ತಾಯಂದಿರಿಗೆ ಈಗಿರುವ ಕೈಗಳ ಜತೆಗೆ ಇನ್ನೆರಡು ಕೈಗಳು ಇರಬಾರದಿತ್ತೇ ಎಂದೆನ್ನಿಸಬಹುದು. ಅಂಥ ತಾಯಂದಿರಿಗೆ ಶುಭ ಸುದ್ದಿಯೊಂದಿದೆ.
ಆಸ್ಟ್ರೇಲಿಯಾದ ಆರ್ಎಂಐಟಿ ವಿಶ್ವವಿದ್ಯಾಲಯದ ಸಂಶೋಧಕರು, ಸಾಮಾನ್ಯ ಮನುಷ್ಯರು ಧರಿಸಬಹುದಾದ ರೋಬೋ ತಂತ್ರಜ್ಞಾನದ ಕೈಯ್ಯೊಂದನ್ನು ತಯಾರಿಸಿದ್ದಾರೆ. ಸೊಂಟಕ್ಕೆ, ಎದೆಗೆ ಕಟ್ಟಿಕೊಳ್ಳಬಹುದಾದ ಇದು, ಧರಿಸಿದವರ ಆಣತಿಯ ಮೇರೆಗೆ ಅವರ ಎದುರಿಗಿರುವವರಿಗೆ ತಿಂಡಿ ತಿನ್ನಿಸುತ್ತದೆ. ಹಾಗಾಗಿ, ಇದಕ್ಕೆ “ಆರ್ಮ್-ಎ-ಡೈನ್’ ಎಂದು ಹೆಸರಿಡಲಾಗಿದೆ. ಆದರೆ, ಒಂದು ಷರತ್ತು- ಈ ಕೈನ ಕೈಯ್ಯಲ್ಲಿ ತಿಂಡಿ ತಿನ್ನಬೇಕಾದರೆ, ಮೊದಲು ಸೆ¾„ಲ್ ಮಾಡಬೇಕು. ನಕ್ಕರಷ್ಟೇ ಊಟ! ಆರ್ ಎಂಐಟಿ ಬಿಡುಗಡೆ ಮಾಡಿರುವ ಈ ವಿಶಿಷ್ಟ “ಕೈ’ನ ವಿಡಿಯೋಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ