CONNECT WITH US  

ಅಮೆರಿಕದಲ್ಲೊಂದು ಅದೃಷ್ಟಹೀನ ಹೊಟೇಲ್‌

ಒಂದು ಹೊಟೇಲ್‌ ಅನ್ನು ಅದೃಷ್ಟಹೀನ ಹೊಟೇಲ್‌ ಎಂದು ಯಾವಾಗ ಕರೆಯುತ್ತಾರೆ? ಆ ಹೋಟೆಲ್‌ಗೆ ಜನರೇ ಬರುವುದಿಲ್ಲ, ಅದು ನಷ್ಟ ಅನುಭವಿಸುತ್ತಿದೆ ಎಂದಾದರೆ ಅಲ್ಲವೇ? ಹಾಗೇನಿಲ್ಲ. ಕೊಲೆರಾಡೊದ ರೆಸ್ಟಾರೆಂಟ್‌ವೊಂದು "ಅದೃಷ್ಟಹೀನ' ಎಂದು ಕರೆಸಿಕೊಂಡಿದೆ. ಕಾರಣ, ಆ ರೆಸ್ಟಾrರೆಂಟ್‌ಗೆ ಈ ವರ್ಷದಲ್ಲಿ ಮೂರು ಬಾರಿ ವಾಹನಗಳು ಬಂದು ಗುದ್ದಿ ಹಾನಿಗೀಡು ಮಾಡಿವೆ. ಕಳೆದ ಶನಿವಾರ ಕೂಡ ಕಾರೊಂದು ಢಿಕ್ಕಿಯಾಗಿ  ರೆಸ್ಟಾರೆಂಟ್‌ನ ಒಳಗೆ ಹೋಗಿ ನಿಂತಿದೆ. ರೆಸ್ಟಾರೆಂಟ್‌ನ ಮುಂಭಾಗದ ಗಾಜು, ಕುರ್ಚಿ, ಮೇಜುಗಳು ಚಿಂದಿ ಯಾಗಿವೆ. ಓರ್ವ ಸಿಬ್ಬಂದಿಗೂ ಗಾಯವಾಗಿದೆ. ಕಾರಿನ ಚಾಲಕ ಮದ್ಯ ಸೇವಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.


Trending videos

Back to Top