CONNECT WITH US  

6 ಸಾವಿರ ರೂ.ಗೆ ಖರೀದಿಸಿದ್ದು  24 ಲಕ್ಷ ರೂ.ಗೆ ಸೇಲ್‌!

ಕೆಲವೊಮ್ಮೆ ಏನಕ್ಕೋ ಇರಲಿ ಎಂದು ಅಲ್ಪ ಹಣ ಕೊಟ್ಟು ಖರೀದಿ ಮಾಡಿದ್ದು, ನಿರೀಕ್ಷೆ ಮೀರಿದ ಲಾಭ ತಂದು ಕೊಡುತ್ತದೆ. ಅಂಥದ್ದೊಂದು ನೆದರ್ಲೆಂಡ್‌ನ‌ಲ್ಲಿ ಆಗಿದೆ. ವ್ಯಕ್ತಿಯೊಬ್ಬ 6 ಸಾವಿರ ರೂ.ಗಳಿಗೆ ತೈಲ ಚಿತ್ರವನ್ನು ಮಳಿಗೆಯಿಂದ ಖರೀದಿ ಮಾಡಿದ್ದ. ಅದನ್ನು ಡೆನ್ಮಾರ್ಕ್‌ನ ಚಿತ್ರಗಾರ ಜಾನ್‌ ಆರ್ಟ್‌ ಎಂಬಾತ ರಚಿಸಿದ್ದ. ಮೊನ್ನೆ ಸೋಮವಾರ ಅದೇ ತೈಲಚಿತ್ರ 24 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಮಾರಾಟವಾಯಿತು.

 ಹರಾಜು ನಡೆಸಿದ ಪಿಟ್‌ ವ್ಯಾನ್‌ ವಿಂಡನ್‌ ಇದೊಂದು ಅತ್ಯುತ್ತಮ ಚಿತ್ರವೆಂದು ಕೊಂಡಾಡಿದ್ದಾರೆ. ತೈಲ ಚಿತ್ರವನ್ನು ಖರೀದಿಸಿದ ವ್ಯಕ್ತಿ ತಮ್ಮ ಹೆಸರು ಬಹಿರಂಗ ಮಾಡಬಾರದು ಎಂದು ಮನವಿ ಮಾಡಿದ್ದರಿಂದ ರಹಸ್ಯ ಕಾಪಿಡಲಾಗಿದೆ. ಇದೇ ರೀತಿಯ ಘಟನೆ ಏಪ್ರಿಲ್‌ನಲ್ಲಿಯೂ ನಡೆದಿತ್ತು.


Trending videos

Back to Top