ಆಭರಣ ಕದಿಯಲು ಹೋಗಿ ನಗೆಪಾಟಲಿಗೀಡಾದ ನೌಕರ !
Team Udayavani, Dec 7, 2018, 6:02 AM IST
ಮಲೇಷ್ಯಾದ ಆಭರಣ ಮಳಿಗೆಯೊಂದರಲ್ಲಿ ಮಳಿಗೆಯ ನೌಕರ ಆಭರಣ ಕದಿಯಲು ಹೋಗಿ ಸಿಕ್ಕಿಬಿದ್ದ ಸಿಸಿಟಿವಿ ದೃಶ್ಯಾವಳಿ ಈಗ ವೈರಲ್ ಆಗಿದೆ. ಭಾರಿ ಸಂಭಾವಿತನಂತೆ ಮಳಿಗೆ ಬಾಗಿಲು ತೆರೆದು ಒಳ ಪ್ರವೇಶಿಸುವ 27 ವರ್ಷ ವಯಸ್ಸಿನ ನೌಕರ, ಮಳಿಗೆ ಮಾಲೀಕನಿಗೆ ನಗುಮೊಗದಿಂದ ಶುಭಾಶಯ ಕೋರುತ್ತಾನೆ.
ಮಾಲೀಕ ಆತನ ಕೈಗೆ ನೆಕ್ಲೆಸ್ ಒಂದನ್ನು ಕೊಟ್ಟು, ಬೇರೆಡೆ ಇಡಲು ಹೇಳಿ ತನ್ನ ಕೆಲಸದಲ್ಲಿ ಮಗ್ನನಾಗುತ್ತಾನೆ. ನೌಕರ ನೆಕ್ಲೆಸ್ ಅನ್ನು ಕುತ್ತಿಗೆಗೆ ಹಾಕಿಕೊಂಡು ಅಲ್ಲಿಂದ ಓಡಿ ಬಾಗಿಲು ತೆರೆಯಲು ಪ್ರಯತ್ನಿಸಿದರೆ ಬಾಗಿಲು ಲಾಕ್ ಅಗಿರುತ್ತದೆ. ಈತನ ವರ್ತನೆ ಕುರಿತು ಅನುಮಾನ ಬಂದ ಮಾಲೀಕ ರಿಮೋಟ್ ಕಂಟ್ರೋಲರ್ ಬಳಸಿ ಮೊದಲೇ ಬಾಗಿಲು ಮುಚ್ಚಿರುತ್ತಾರೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA