ಭಾರಿ ಮೊತ್ತದ ಹಣ ಹಿಂದಿರುಗಿಸಿದ ಕ್ಯಾಬ್ ಚಾಲಕ
Team Udayavani, Dec 11, 2018, 3:25 AM IST
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನ ಟ್ಯಾಕ್ಸಿ ಚಾಲಕರೊಬ್ಬರ ಪ್ರಾಮಾಣಿಕತೆ ಅಮೆರಿಕದಲ್ಲೂ ಸುದ್ದಿಯಾಗಿದೆ. ಟಾಕ್ಸಿ ಚಾಲಕ ವೀರಫೊಲ್ ಕ್ಲಾಮ್ಸಿರಿ(57) ತನ್ನ ಕೈಗೆ ಸಿಕ್ಕ ಭಾರಿ ಮೊತ್ತದ ಹಣವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದ ಕಾರಣ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ. ಬ್ಯಾಂಕಾಕ್ಗೆ ಬಂದಿದ್ದ ಅಮೆರಿಕ ಪ್ರವಾಸಿ ಜೆರ್ರಿ ಅಲೆನ್ ಹಾರ್ಟ್ ಸುವರ್ಣಭೂಮಿ ವಿಮಾನ ನಿಲ್ದಾಣಕ್ಕೆ ಕ್ಯಾಬ್ನಲ್ಲಿ ಬಂದರು.
ಇಳಿಯುವಾಗ 7.26 ಲಕ್ಷ ಇರಿಸಿದ್ದ ಪುಟ್ಟ ಚೀಲವನ್ನು ಅವರು ಕ್ಯಾಬ್ನಲ್ಲೇ ಬೀಳಿಸಿಕೊಂಡಿದ್ದರು. ವಿಮಾನ ನಿಲ್ದಾಣ ದಲ್ಲಿ ಅವರಿಗೆ ಹಣ ಕಳೆದುಕೊಂಡಿದ್ದು ತಿಳಿದು, ವಿಮಾನ ರದ್ದುಪಡಿಸಿ ಅಧಿಕಾರಿಗಳನ್ನು ಈ ಕುರಿತು ವಿಚಾರಿಸಿದ್ದಾರೆ. ಅಷ್ಟರಲ್ಲಿ ಚಾಲಕ ಆ ಹಣವನ್ನು ಹಿಂದಿರುಗಿಸಿಯಾಗಿತ್ತು.