ಅಮೆರಿಕದಲ್ಲಿ ಭಾರಿ ಗಾತ್ರದ ವಜ್ರ ಉತ್ಖನನ
Team Udayavani, Dec 16, 2018, 9:20 AM IST
ಉತ್ತರ ಅಮೆರಿಕದಲ್ಲಿ ವಿಶ್ವದ ಅತಿ ದೊಡ್ಡ ಗಾತ್ರದ ಮತ್ತು ಭಾರಿ ಬೆಲೆಬಾಳುವ ವಜ್ರದ ಉತ್ಖನನವಾಗಿದೆ. ಈವರೆಗೂ ಸಿಕ್ಕಿರುವ ಅತಿ ದೊಡ್ಡ ಗಾತ್ರದ 30 ವಜ್ರಗಳಲ್ಲಿ ಇದೂ ಒಂದು ಎನ್ನಲಾಗಿದೆ. ಕೆನಡಾದ ಪ್ರೋಜನ್ ನಾರ್ಥ್ನಲ್ಲಿ ಪ್ರಸಿದ್ಧ ವಜ್ರೋದ್ಯಮ ಸಂಸ್ಥೆಗಳಾದ ಡೊಮೀನಿಯನ್ ಡೈಯಾಮಂಡ್ ಮೈನ್ಸ್ ಮತ್ತು ರಿಯೊ ಟಿಂಟಿ ಗ್ರೂಪ್ ಈ ವಜ್ರವನ್ನು ಹೊರತೆಗೆದಿದೆ. ಇದು ಹಳದಿ ಬಣ್ಣದ 552 ಕ್ಯಾರಟ್ ವಜ್ರ ಇದಾಗಿದೆ. ಕೆನಡಾದಲ್ಲಿ ದೊರೆತಿದ್ದ ಈವರೆಗಿನ ಅತಿ ದೊಡ್ಡ ಗಾತ್ರದ ವಜ್ರ ಎನಿಸಿಕೊಂಡಿದ್ದ ವಜ್ರಕ್ಕಿಂತ ಇದು 3 ಪಟ್ಟು ದೊಡ್ಡದಿದೆ. ಹಳದಿ ಬಣ್ಣದ ವಜ್ರವಾದ್ದರಿಂದ ಇದರ ದರವೂ ಹೆಚ್ಚೇ ಇರಲಿದೆ ಎಂದು ಹೇಳಲಾಗಿದೆ.