ಸಾಕ್ಸ್ ಮೂಸಿದ್ದೇ ಎಡವಟ್ಟಾಗೋಯ್ತು!
Team Udayavani, Dec 18, 2018, 3:56 AM IST
ಚೀನಾದ ವ್ಯಕ್ತಿಯೊಬ್ಬರು ತೀವ್ರ ಸ್ವರೂಪದ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವುದು ಸುದ್ದಿಯಾಗಿದೆ. ಶ್ವಾಸಕೋಶ ಸೋಂಕು ಸಾಮಾನ್ಯ ಸಮಸ್ಯೆ ಆದರೂ ಏಕೆ ಇಷ್ಟು ಸುದ್ದಿಯಾಗಲು ಕಾರಣ ಎಂದು ಪ್ರಶ್ನಿಸುತ್ತೀರಾ? ಅವರಿಗೆ ಸೋಂಕು ತಗುಲಲು ಕಾರಣ ಬೇರಾರೂ ಅಲ್ಲ, ಅವರದ್ದೇ ಸಾಕ್ಸ್ಗಳು! ಫುಜಿಯಾನ್ ಪ್ರಾಂತ್ಯದ ಈ ವ್ಯಕ್ತಿಗೆ ಪ್ರತಿದಿನ ಕಚೇರಿಯಿಂದ ವಾಪಸ್ಸಾದ ಬಳಿಕ ಕಾಲುಚೀಲ ಬಿಚ್ಚಿ ಇರಿಸುವ ಮುನ್ನ ಅವುಗಳನ್ನು ಮೂಸುವ ಅಭ್ಯಾಸ ಇತ್ತಂತೆ.
ಅವರ ಬೆವೆತ ಪಾದಗಳು ಸಾಕ್ಸ್ ಒಳಗೆ ಫಂಗಸ್ ಸೋಂಕು ಉಂಟು ಮಾಡಿತ್ತು. ವ್ಯಕ್ತಿ ಸಾಕ್ಸನ್ನು ಮೂಸಿದಾಗ ಆ ಸೋಂಕು ಶ್ವಾಸಕೋಶ ತಲುಪಿ ಅವರಿಗೆ ತೊಂದರೆ ತಂದೊಡ್ಡಿದೆ. ಮಗುವಿನ ಪಾಲನೆ ಮಾಡುತ್ತಿದ್ದ ಅವರು ಪ್ರತಿದಿನ ತಡವಾಗಿ ಮಲಗುತ್ತಿದ್ದುದರಿಂದ ರೋಗ ನಿರೋಧಕ ಶಕ್ತಿ ಕುಗ್ಗಿದ್ದು ಕೂಡ ಅವರ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಗಬ್ಬು ನಾರುವ ಸಾಕ್ಸ್ಗಳು ಮಾರಣಾಂತಿಕ ತೊಂದರೆಯನ್ನೂ ತಂದೊಡ್ಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈಗ ವೈದ್ಯರು ಸಾಕ್ಸ್ ಗಳ ಸ್ವತ್ಛತೆ ಕುರಿತು ಅರಿವು ಮೂಡಿಸುವ ಕೆಲಸ ಶುರು ಮಾಡಿದ್ದಾರಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!