ಐಫೋನ್ನ “ಸಿರಿ’ಯಂತೆ ಮಾತನಾಡುವ ಮಹಿಳೆ
Team Udayavani, Dec 27, 2018, 4:44 AM IST
ಆ್ಯಪಲ್ ಐಫೋನ್ನ ಧ್ವನಿ ಸೇವೆ “ಸಿರಿ’ಯ ಧ್ವನಿಗೆ ಬಹು ತೇಕರು ಮಾರುಹೋಗಿರುತ್ತಾರೆ. ಅಮೆರಿಕದ ರ್ಯಾಪರ್ ಒಬ್ಬರು ಸಿರಿಯನ್ನು ಎಲ್ಲೂ ಬಿಡದಂತೆ ಅನುಕರಿಸಿ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾರೆ. ಇವರು ತಮ್ಮ ರ್ಯಾಪ್ ಸಂಗೀತದ ಕಾರ್ಯಕ್ರಮಗಳಲ್ಲಿ ಸಿರಿಯಂತೆ ಮಾತನಾಡುತ್ತಿದ್ದರು. ನೆರೆದಿ ರುವ ಜನರು ಹಿನ್ನೆಲೆಯಲ್ಲಿ ಸಿರಿಯ ಧ್ವನಿ ಬಳಸಲಾಗುತ್ತಿದೆ ಎಂದು ಭಾವಿಸಿದ್ದರು. ರ್ಯಾಪರ್ ಕಾಸ್ ಸಿರಿಯಂತೆ ಮಾತನಾಡುವುದನ್ನು ಎರಿನಿ ಎಂಬವವರು ವಿಡಿಯೋ ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಜೊತೆಗೆ ಕಳೆದ ರಾತ್ರಿ “ನಾನು ಸಿರಿಯ ಮನುಷ್ಯ ರೂಪವನ್ನುನೋಡಿದೆ’ ಎಂದು ಕೂಡ ಬರೆದಿದ್ದರು. ಈ ವಿಡಿಯೋ
ನೋಡಿ ಹಲ ವರು ಚಕಿತರಾಗಿದ್ದಾರೆ. ಇನ್ನೂ ಕೆಲವರು ಆ್ಯಪಲ್ ಸಂಸ್ಥೆಗೆ ಅವರನ್ನು ಉದ್ಯೋಗಿಯಾಗಿ
ನೇಮಿಸಿಕೊಳ್ಳಲು ಸಲಹೆ ನೀಡಿದ್ದಾರೆ.