CONNECT WITH US  

ಸೈಕಲ್‌ಗೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು

ಚೀನಾದಲ್ಲಿ ಕಾರು ಮತ್ತು ಸೈಕಲ್‌ ಢಿಕ್ಕಿ ಹೊಡೆದ ಫೋಟೋವೊಂದು ಭಾರೀ ವೈರಲ್‌ ಆಗಿತ್ತು. ಈ ಫೋಟೋದಲ್ಲಿ ಸೈಕಲ್‌ಗೆ ಢಿಕ್ಕಿ ಹೊಡೆದ ಕಾರಿನ ಬಂಪರ್‌ ನಜ್ಜುಗುಜ್ಜಾ ಗಿತ್ತು. ಆದರೆ ಸೈಕಲ್‌ಗೆ ಯಾವುದೇ ಹಾನಿಯೂ ಆಗಿರಲಿಲ್ಲ. ಜನರೆಲ್ಲಾ ಇದು, ಯಾರೋ ತಮಾಷೆಗಾಗಿ ಫೋಟೋಶಾಪ್‌ ಮಾಡಿ ಹರಿಬಿಟ್ಟಿರುವ ವೀಡಿಯೋ ಎಂದೇ ಭಾವಿಸಿದ್ದರು. ಆದರೆ ಪೊಲೀಸರೇ ಈ ಘಟನೆಗೆ ಸಂಬಂಧಿಸಿದ ವೀಡಿಯೋವನ್ನು ಬಿಡುಗಡೆ ಮಾಡಿ, ಇದು ನಿಜವಾಗಿಯೂ ನಡೆದ ಘಟನೆ ಎಂದು ಹೇಳಿದ್ದಾರೆ. ಇದಾದ ಬಳಿಕ ಜನರು "ಆ ಸೈಕಲ್ಲನ್ನು ಯಾವ ವಸ್ತುವಿನಿಂದ ತಯಾರಿಸಲಾಗಿದೆ' ಎಂದು ಕೇಳಲಾರಂಭಿಸಿದ್ದಾರೆ. ಸೈಕಲ್‌ ಸವಾರನಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಆದರೆ, ಸೈಕಲ್‌ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

Trending videos

Back to Top