ಸೈಕಲ್ಗೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು
Team Udayavani, Jan 5, 2019, 6:16 AM IST
ಚೀನಾದಲ್ಲಿ ಕಾರು ಮತ್ತು ಸೈಕಲ್ ಢಿಕ್ಕಿ ಹೊಡೆದ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಈ ಫೋಟೋದಲ್ಲಿ ಸೈಕಲ್ಗೆ ಢಿಕ್ಕಿ ಹೊಡೆದ ಕಾರಿನ ಬಂಪರ್ ನಜ್ಜುಗುಜ್ಜಾ ಗಿತ್ತು. ಆದರೆ ಸೈಕಲ್ಗೆ ಯಾವುದೇ ಹಾನಿಯೂ ಆಗಿರಲಿಲ್ಲ. ಜನರೆಲ್ಲಾ ಇದು, ಯಾರೋ ತಮಾಷೆಗಾಗಿ ಫೋಟೋಶಾಪ್ ಮಾಡಿ ಹರಿಬಿಟ್ಟಿರುವ ವೀಡಿಯೋ ಎಂದೇ ಭಾವಿಸಿದ್ದರು. ಆದರೆ ಪೊಲೀಸರೇ ಈ ಘಟನೆಗೆ ಸಂಬಂಧಿಸಿದ ವೀಡಿಯೋವನ್ನು ಬಿಡುಗಡೆ ಮಾಡಿ, ಇದು ನಿಜವಾಗಿಯೂ ನಡೆದ ಘಟನೆ ಎಂದು ಹೇಳಿದ್ದಾರೆ. ಇದಾದ ಬಳಿಕ ಜನರು “ಆ ಸೈಕಲ್ಲನ್ನು ಯಾವ ವಸ್ತುವಿನಿಂದ ತಯಾರಿಸಲಾಗಿದೆ’ ಎಂದು ಕೇಳಲಾರಂಭಿಸಿದ್ದಾರೆ. ಸೈಕಲ್ ಸವಾರನಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಆದರೆ, ಸೈಕಲ್ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ