ಯುವತಿಯರಿಗೆ ಕಚ್ಚಿ ಪೊಲೀಸರ ಅತಿಥಿಯಾದ
Team Udayavani, Jan 17, 2019, 12:30 AM IST
ನಾಯಿಗಳ ವಿಚಾರಕ್ಕಾಗಿ ಜಗಳ, ಗಲಾಟೆ ನಡೆಯುವುದು ಹೊಸ ವಿಚಾರ ಅಲ್ಲ. ಅದು ವಿಪರೀತಕ್ಕೆ ಹೋಗಿ ಏನೇನೋ ನಡೆದು ಹೋಗುತ್ತದೆ. ಅಂಥ ಒಂದು ಘಟನೆ ಅಹ್ಮದಾಬಾದ್ನಲ್ಲಿ ನಡೆದಿದೆ. ಅಲ್ಲಿ 25 ವರ್ಷ ವಯಸ್ಸಿನ ವ್ಯಕ್ತಿ ಬೀದಿ ನಾಯಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರಿಗೆ ಕಚ್ಚಿದ್ದಾನೆ. ಕಮರ್ಜಹಾನ್ ಬಾನು ಪಠಾನ್ (50)ಎಂಬುವರು ಬೀದಿ ನಾಯಿಗೆ ಇಸ್ನಾಪುರ್ ಪ್ರದೇಶದಲ್ಲಿ ಬೀದಿ ನಾಯಿಗೆ ಆಹಾರ ನೀಡುತ್ತಿದ್ದರು. ಅದು ರಸ್ತೆಯ ಬದಿಯಲ್ಲಿ ಹೋಗುತ್ತಿದ್ದವರನ್ನು ನೋಡಿ ಬೊಗಳುತ್ತಿತ್ತು ಮತ್ತು ಕೆಲವೊಮ್ಮೆ ಕಚ್ಚಲು ಕೂಡ ಹೋಗುತ್ತಿತ್ತು. ಮಹಾರುಫ್ಖಾನ್ ಎಂಬಾತ ಈ ಬಗ್ಗೆ ಆಕ್ಷೇಪ ಮಾಡಿದ್ದ. ಅದಕ್ಕೆ ನಾಯಿಗೆ ಆಹಾರ ನೀಡುತ್ತಿದ್ದ ಮಹಿಳೆ ಸರಿಯಾದ ರೀತಿಯಲ್ಲಿ ವರ್ತಿಸುವಂತೆ ಎಚ್ಚರಿಕೆ ನೀಡಿ, ದಬಾಯಿಸಿದ್ದರು. ಅದರಿಂದ ಕೋಪಗೊಂಡಿದ್ದ ಮಹಾರುಫ್ಖಾನ್ ಮಹಿಳೆಯ ಮೊಮ್ಮಕ್ಕಳನ್ನು ನೋಡಿ ಬಯ್ಯ ತೊಡಗಿದ. ಅಷ್ಟು ಮಾತ್ರ ಆಗಿದ್ದಿದ್ದರೆ ತೊಂದರೆ ಇರು ತ್ತಿರಲಿಲ್ಲವೇನೋ? ಅವರ ಮುಂಗೈಕಟ್ಟುಗಳಿಗೆ ಕಚ್ಚಿ ಗಾಯ ಮಾಡಿದ್ದಾನೆ. ಅಲ್ಲೇ ಇದ್ದ ಸ್ಥಳೀಯರು ಆತನಿಗೆ ಏಟು ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಎರಡೂ ಕಡೆಯವರೂ ಪರಸ್ಪರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ