ಇಹಲೋಕ ತ್ಯಜಿಸಿದ ವಿಶ್ವದ ಮುದ್ದಾದ ನಾಯಿ
Team Udayavani, Jan 21, 2019, 12:30 AM IST
ವಿಶ್ವದಲ್ಲೇ ಅತ್ಯಂತ ಮುದ್ದಾದ ನಾಯಿಯೆಂದೇ ಖ್ಯಾತಿ ಗಳಿಸಿದ್ದ “ಬೂ’ (Boo), ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದೆ ಎಂದು ಅದರ ಪೋಷಕರು ಫೇಸ್ಬಕ್ನಲ್ಲಿ ತಿಳಿಸಿದ್ದಾರೆ. ಸ್ಯಾನ್ಫ್ರಾನ್ಸಿ ಸ್ಕೋದಲ್ಲಿನ ಮನೆಯೊಂದರಲ್ಲಿ ಗಂಡು ನಾಯಿ ಯಾದ “ಬೂ’, ತನ್ನ ಸಂಗಾತಿ “ಬಡ್ಡೀ’ (Buddy) ಎಂಬ ಹೆಣ್ಣು ನಾಯಿಯೊಂದಿಗೆ ವಾಸಿಸುತ್ತಿತ್ತು. ಇದರ ಸಾವಿನ ಬಗ್ಗೆ ಫೇಸ್ಬುಕ್ನಲ್ಲಿ ಬರೆದು ಕೊಂಡಿರುವ ಪೋಷಕರು, “”ಇತ್ತೀಚೆಗೆ, “ಬಡ್ಡೀ’ಯು ಹೃದಯಾಘಾತದಿಂದ ಸಾವನ್ನಪ್ಪಿತ್ತು. ಆನಂತರ, “ಬೂ’ ಕೂಡ ಹೃದಯಾಘಾತದ ಗುಣಲಕ್ಷಣಗಳನ್ನು ತೋರುತ್ತಿತ್ತು. ಚಿಕಿತ್ಸೆ ಕೊಡಿಸುವ ಮುನ್ನವೇ ಅದು ಅಸುನೀಗಿತು. ಬಹುಶಃ “ಬಡ್ಡೀ’ಯ ಅಗಲಿಕೆಯನ್ನು “ಬೂ’ಗೆ ಭರಿಸಲಾಗಿಲ್ಲ” ಎಂದು ಹೇಳಿದ್ದಾರೆ. 2012ರಲ್ಲಿ ವರ್ಜೀನಿಯಾ ಸರಕಾರದಿಂದ ಅತಿ ಮುದ್ದಾದ ಸಾಕು ಪ್ರಾಣಿಯೆಂಬ ಹೆಗ್ಗಳಿಕೆಗೆ ಬೂ ಪಾತ್ರವಾಗಿತ್ತು.