ರೋಡ್ರೋಲರ್ನಲ್ಲಿ ಬಂದು ಮದುವೆಯಾದ ಯುವಕ!
Team Udayavani, Jan 29, 2019, 5:24 AM IST
ಕಳೆದ ವರ್ಷ, ದಕ್ಷಿಣ ಕನ್ನಡದಲ್ಲಿ ಜೆಸಿಬಿ ಯಂತ್ರಗಳ ಮಾಲೀಕನೊಬ್ಬ ತನ್ನ ಮದುವೆ ದಿನ ಮದುವಣಗಿತ್ತಿಯೊಂದಿಗೆ ಜೆಸಿಬಿ ಯಂತ್ರದಲ್ಲೇ ಮೆರವಣಿಗೆ ಹೋಗಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈಗ, ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಅರ್ಕಾ ಪಾತ್ರಾ (30) ಎಂಬ ಮದುಮಗ, ಕಲ್ಯಾಣ ಮಂಟಪಕ್ಕೆ ರೋಡ್ ರೋಲರ್ನಲ್ಲಿ ಆಗಮಿಸಿ ಸುದ್ದಿಯಾಗಿದ್ದಾನೆ. ಕೃಷ್ಣಾ
ನಗರ ಉಕಿಲ್ಪಾರಾದಲ್ಲಿ ಈ ಮದುವೆ ನಡೆದಿದೆ. ಅಂದಹಾಗೆ, ಈ ಮದುಮಗ ಚಿನ್ನದ ವ್ಯಾಪಾರಿಯೊಬ್ಬರ ಮಗ. ದುಬಾರಿ ಕಾರಿನಲ್ಲೇ ಕಲ್ಯಾಣ ಮಂಟಪಕ್ಕೆ ಆಗಮಿಸಬಹುದಾಗಿತ್ತು. ಆದರೂ, ತನ್ನ ಮದುವೆ ವಿಶೇಷವಾಗಿರಲೆಂದು ತಾನು ರೋಡ್ ರೋಲರ್ ನಲ್ಲಿ ಬಂದಿದ್ದಾಗಿ ಆತ ಹೇಳಿದ್ದಾನೆ. ಭಾರತದಲ್ಲಿ ಮಾತ್ರ ಹೀಗಾಗುತ್ತೆ ಅಂತೇನಿಲ್ಲ. ಕಳೆದ ವರ್ಷ ಚೀನಾದಲ್ಲಿ ಮದುವಣಗಿತ್ತಿಯೊಬ್ಬಳು ಬಸ್ ಚಲಾಯಿಸಿಕೊಂಡು ಮದುವೆ ಮಂಟಪಕ್ಕೆ ತೆರಳಿದ್ದಳು. ಮಾರ್ಗ ಮಧ್ಯೆ, ವರನನ್ನು ಹತ್ತಿಸಿಕೊಂಡು ಬಂದು ಹಸೆಮಣೆ ಏರಿದ್ದು ಸುದ್ದಿಗೆ ಗ್ರಾಸವಾಗಿತ್ತು.