ಸತ್ತ ಮರಿಯನ್ನು ಹೊತ್ತು ಸಾಗಿದ ತಾಯಿ ಡಾಲ್ಫಿನ್!
Team Udayavani, Feb 4, 2019, 4:32 AM IST
ನಿರುಪದ್ರವಿ ಜೀವಿಗಳಾದ ಡಾಲ್ಫಿನ್ಗಳನ್ನು ಮಾನವರು ಮನರಂಜನೆಯ ಸರಕಿನಂತೆ ಬಳಸಿಕೊಳ್ಳುವ ಚಾಳಿ ಎಲ್ಲೆಡೆ ಇದೆ. ಅವುಗಳಿಗಾಗುವ ತೊಂದರೆಗಳನ್ನು ಯಾರೂ ಲೆಕ್ಕಿಸುವುದಿಲ್ಲ ನ್ಯೂಜಿಲೆಂಡ್ನ ಬೇ ಆಫ್ ಐಲ್ಯಾಂಡ್ನಲ್ಲಿ ಡಾಲ್ಫಿನ್ ಒಂದು ಸತ್ತ ತನ್ನ ಮರಿಯನ್ನು ಹೊತ್ತು ಸಾಗುತ್ತಿದ್ದ ಮನಕಲಕುವ ವಿಡಿಯೋವೊಂದು ಹೊರಬಿದ್ದಿದೆ. ಸತ್ತ ತನ್ನ ಮರಿಯನ್ನು ಹೊತ್ತು ಸಾಗುವ ವೇಳೆ ತಾಯಿ ಡಾಲ್ಫಿನ್ ಅದನ್ನು ಕೆಳಗೆ ಬಿಡುತ್ತಿತ್ತು. ಕೂಡಲೇ ಅಕ್ಕಪಕ್ಕದಲ್ಲಿದ್ದ ಡಾಲ್ಫಿನ್ಗಳು ಸ್ಥಳಕ್ಕೆ ಬಂದು ಮರಿಯನ್ನು ಎತ್ತಿಕೊಡಲು ತಾಯಿ ಡಾಲ್ಫಿನ್ಗೆ ನೆರವಾಗುತ್ತಿದ್ದವು.
ಈ ದೃಶ್ಯ ಡಾಲ್ಫಿನ್ ಗಳಲ್ಲಿಯ ಮಾತೃ ವಾತ್ಸಲ್ಯವನ್ನು ತೋರುತ್ತದೆ ಎಂದು ನ್ಯೂಜಿಲೆಂಡ್ ಪರಿಸರ ರಕ್ಷಣೆ ಇಲಾಖೆ ಪ್ರಕಟಣೆಯಲ್ಲಿ ಬರೆದಿದೆ. ತಾಯಿ ಡಾಲ್ಫಿನ್ ತುಂಬಾ ನೋವಿನಲ್ಲಿದೆ. ಅದಕ್ಕೆ ಹೆಚ್ಚನ ಸ್ಥಳಾವಕಾಶ ಮತ್ತು ಸಮಯ ಬೇಕಿದೆ. ಜಲಕ್ರೀಡೆಯಲ್ಲಿ ನಿರತವಾಗಿರುವವರು ಡಾಲ್ಫಿನ್ಗೆ ಸ್ಥಳ ನೀಡಬೇಕು ಮತ್ತು ತೊಂದರೆ ಕೊಡಬಾರದು ಎಂದು ಅಧಿಕಾರಿ ಘೋಷಿಸಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಮಾನವರ ಜಲಕ್ರೀಡೆ,ದೋಣಿ ಸಂಚಾರದಿಂದಲೂ ಡಾಲ್ಫಿನ್ಗಳು ಸಾವಿಗೀಡಾಗುತ್ತವೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ