ಜಾಲತಾಣದಲ್ಲಿ ಕಿಂಗ್ ಆಯ್ತು ಶತದಿನದ ಮಗು!
Team Udayavani, Feb 14, 2019, 4:24 AM IST
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೊ, ವಿಡಿಯೋಗಳು ವೈರಲ್ ಆಗುತ್ತವೆ. ಜನರು ಮುದ್ದು ಮಕ್ಕಳನ್ನು ನೋಡಿ ಸಂತಸ ಪಡುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ತನ್ನ 100ನೇ ದಿನದ ಜನ್ಮದಿನ ವನ್ನು ಆಚರಿಸಿಕೊಂಡು ಎಲಿಯಟ್ ನೋಹ್ ಯೆ ಜಾಲತಾಣಿಗರಿಂದ “ರಾಜ’ ಎಂದು ಬಿರುದು ಪಡೆದು ಕೊಂಡಿದ್ದಾರೆ. ಕೊರಿಯನ್ ಸಂಪ್ರದಾಯದಂತೆ ಎಲಿಯಟ್ ನ 100ನೇ ದಿನದ ಜನ್ಮ ದಿನಾಚರಣೆಯನ್ನು ಅವರ ಮನೆಯಲ್ಲಿ ನೆರವೇರಿಸಲಾಗಿತ್ತು. ಅದರ ಫೋಟೊಗಳನ್ನು ಏಲಿಯಟ್ನ ಸಂಬಂಧಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಮುದ್ದಾದ ಎಲಿಯಟ್ನ ಚಿತ್ರಗಳು ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿವೆ. ಜಾಲತಾಣದಲ್ಲಿ ಒಬ್ಬ ರಾಜ ಉದಯಿಸಿದ್ದಾನೆ ಎಂದು ಹೇಳಿರುವ ಜಾಲತಾಣಿಗರು, ಆತನನ್ನು “ಕಿಂಗ್ ಎಲಿಯೆಟ್’ ಎಂದೇ ಕರೆದಿದ್ದಾರೆ.