CONNECT WITH US  

ಬಾಲಿವುಡ್ ಭಾಯಿಜಾನ್ ಸಲ್ಲು ಭರ್ಜರಿ ಎಂಟ್ರಿ ; ಹಳೇ ದಾಖಲೆ ಧೂಳೀಪಟ

ಬಾಲಿವುಡ್ ಭಾಯಿಜಾನ್ ಸಲ್ಮಾನ್‌ ಖಾನ್‌ ಅಭಿನಯದ ಅದ್ಧೂರಿ ಚಿತ್ರ "ಪ್ರೇಮ್‌ ರತನ್‌ ಧನ್‌ ಪಾಯೊ'' ದಾಖಲೆಯ ಗಳಿಕೆ ಕಾಣುವ ಮೂಲಕ ಬಿಟೌನ್'ನ ಹಿಂದಿನ ದಾಖಲೆಗಳನ್ನು ಧೂಳೀಪಟಗೈದಿದೆ.

ವಿಶ್ವದಾದ್ಯಂತ ಬಿಡುಗಡೆಯಾಗಿ ಕೇವಲ 5 ದಿನಗಳೊಳಗೆ 150 ಕೋಟಿ ಬಾಚಿರುವ 'ಪ್ರೇಮ್ ರತನ್ ಧನ್ ಪಾಯೊ' ಸಲ್ಲು ಮಿಯಾನ ಅದ್ಭುತ ಒಪನಿಂಗ್ ಪಡೆದ ಚಿತ್ರವೆಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ.

ದೀಪಾವಳಿಗೆ ತೆರೆಕಂಡ ಈ ಚಿತ್ರವು ಮೊದಲ ದಿನವೇ 40.35 ಕೋಟಿ ರೂ. ಗಳಿಕೆ  ದಾಖಲಿಸಿತು. ಎರಡನೇ ದಿನವಾದ ಶುಕ್ರವಾರ 31.05 ಕೋಟಿ, ಶನಿವಾರ 30.07 ಕೋಟಿಗಳಿಸುವ ಮೂಲಕ ಕೇವಲ 3ದಿನಗಳಲ್ಲಿ 100ಕೋಟಿ ಕ್ಲಬ್'ಗೆ ಸೇರಿದ ಚಿತ್ರವೆಂಬ ದಾಖಲೆ ನಿರ್ಮಿಸಿದೆ.

ಈ ಹಿಂದೆ ಸಲ್ಲುಮಿಯಾ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರವು 5 ದಿನಗಳಲ್ಲಿ 100ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರವೆಂಬ ಹೆಗ್ಗಳಿಕೆ ಪಡೆದುಕೊಂಡಿತ್ತು.

ಅಷ್ಟೇ ಅಲ್ಲದೆ ಭಾನುವಾರ 28.30 ಕೋಟಿ ಹಾಗೂ ಸೋಮವಾರ 13.62+ ಕೋಟಿ ಗಳಿಕೆ ಕಾಣುವ ಮೂಲಕ ಬಾಲಿವುಡ್ ಬಾಕ್ಸಾಫೀಸ್'ನಲ್ಲಿ ಅತೀ ವೇಗದಲ್ಲಿ ಒಟ್ಟು 143.39+ ಕೋಟಿ ಕಲೆಕ್ಷನ್ ಮಾಡಿದ ಚಿತ್ರವೆಂಬ ಖ್ಯಾತಿ ಪಡೆದಿದೆ.

 ಪ್ರೇಮ್ ರತನ್ ಧನ್ ಪಾಯೊ ತಮಿಳು ಮತ್ತು ತೆಲುಗು ಭಾಷೆಗೆ ಡಬ್ ಆಗಿದ್ದು, ಹಾಗೆಯೇ ವಿದೇಶಿ ಕಲೆಕ್ಷನ್'ನ್ನು ಸೇರಿಸಿದರೆ ಚಿತ್ರದ ಒಟ್ಟು ಗಳಿಕೆಯು 150 ಕೋಟಿ ದಾಟಲಿದೆ ಎಂದು ಸಿನಿಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

ಸೂರಜ್‌ ಬರ್ಜಾತ್ಯ ನಿರ್ದೇಶನದ ಈ ಫ್ಯಾಮಿಲಿ ಎಂಟರ್ಟೈನರ್ ಚಿತ್ರದಲ್ಲಿ ಸಲ್ಮಾನ್ ಖಾನ್'ಗೆ ನಾಯಕಿಯಾಗಿ ಸೋನಂ ಕಪೂರ್ ಅಭಿನಯಿಸಿದ್ದಾರೆ.

*ಕಪ್ಪು ಮೂಗುತ್ತಿ

Trending videos

Back to Top