CONNECT WITH US  

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ರಾಣಿ ಮುಖರ್ಜಿ

ಮುಂಬಯಿ: ಬಾಲಿವುಡ್‌ ನಟಿ ರಾಣಿ ಮುಖರ್ಜಿ ಮತ್ತು ಚಿತ್ರ ನಿರ್ಮಾಪಕರಾಗಿರುವ ಆಕೆಯ ಪತಿ ಆದಿತ್ಯ ಚೋಪ್ರಾ ಅವರಿಂದು ತಮ್ಮ ನವಜಾತ ಹೆಣ್ಣು ಮಗುವನ್ನು ಸಂಭಮೋಲ್ಲಾಸಗಳೊಂದಿಗೆ ಸ್ವಾಗತಿಸಿದರು.

ರಾಣಿ ಮುಖರ್ಜಿ ಅವರಿಗೆ ಹೆಣ್ಣು ಮಗು ಜನಿಸಿರುವುದನ್ನು ಆಕೆಯ ಸಹೋದರ ಉದಯ ಚೋಪ್ರಾ ಮತ್ತು ಗೆಳೆಯ ಕರಣ್‌ ಜೋಹರ್‌ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

"ಇಟ್ಸ್‌ ಎ ಗರ್ಲ್' ಎಂದು ಉದಯ್‌ ಚೋಪ್ರಾ ಅವರು ಟ್ವಿಟರ್‌ನಲ್ಲಿ ಉದ್ಗರಿಸಿದ್ದಾರೆ.

"ನಾನೀಗ ಸುಂದರವಾದ ಹೆಣ್ಣು ಮಗುವಿನ ಚಿಕ್ಕಪ್ಪ; ರಾಣಿ ಮತ್ತು ಆದಿ ಗೆ ಹೆಣ್ಣು ಮಗು ಹುಟ್ಟಿದೆ' ಎಂದು ಕರಣ್‌ ಬರೆದಿದ್ದಾರೆ.

36ರ ಹರೆಯದ ರಾಣಿ ಮುಖರ್ಜಿ ಮತ್ತು 42ರ ಹರೆಯದ ಆದಿತ್ಯ ಅವರು ಕಳೆದ ವರ್ಷ ಎಪ್ರಿಲ್‌ನಲ್ಲಿ ಇಟಲಿಯಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು. ರಾಣಿಗೆ ಇದು ಮೊದಲ ಮದುವೆಯಾಗಿದ್ದರೆ ಆದಿತ್ಯ ಈ ಹಿಂದೆ ಪಾಯಲ್‌ ಖನ್ನಾ ಅವರನ್ನು ಮದುವೆಯಾಗಿ 2008ರಲ್ಲಿ ಆಕೆಯಿಂದ ವಿಚ್ಛೇದನ ಪಡೆದಿದ್ದರು.


Trending videos

Back to Top