CONNECT WITH US  

ರಕ್ತಕಣ್ಣೀರು ಸೇರಿ 300ಚಿತ್ರಗಳಲ್ಲಿ ನಟಿಸಿದ್ದ ಜ್ಯೋತಿಲಕ್ಷ್ಮಿ ನಿಧನ

ಚೆನ್ನೈ: ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ನಟಿ ಜ್ಯೋತಿಲಕ್ಷ್ಮೀ (68ವರ್ಷ) ಇಲ್ಲಿನ ಆಸ್ಪತ್ರೆಯಲ್ಲಿ ಸೋಮವಾರ ತಡ ರಾತ್ರಿ ನಿಧನರಾಗಿದ್ದಾರೆಂದು ಪಿಆರ್ ರಿಯಾಜ್ ಅಹ್ಮದ್ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜ್ಯೋತಿಲಕ್ಷ್ಮಿ ಅವರು ಸೋಮವಾರ 11.40ಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಚೆನ್ನೈನ ಕನ್ನಮ್ಮಪೆಟ್ಟೈಯಲ್ಲಿ ಜ್ಯೋತಿ ಲಕ್ಷ್ಮಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. 

1970-80ರ ದಶಕದಲ್ಲಿ ಹೀರೋಯಿನ್ ಆಗಿ ಮೆರೆದಿದ್ದ ಜ್ಯೋತಿಲಕ್ಷ್ಮೀ  ಅತ್ಯುತ್ತಮ ಡ್ಯಾನ್ಸ್ ಮೂಲಕವೂ ಪ್ರೇಕ್ಷಕರ ಮನಗೆದ್ದಿದ್ದರು. ಟಿಆರ್ ರಾಮಣ್ಣ ಅವರ ಪೆರಿಯಾ ಇಡಾಥು ಪೆನ್ನ್ ಚಿತ್ರದಲ್ಲಿ ಎಂಜಿ ರಾಮಚಂದ್ರನ್, ಬಿ. ಸರೋಜಾದೇವಿ ಜೊತೆ ನಟಿಸಿದ್ದ ಜ್ಯೋತಿಲಕ್ಷ್ಮಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು.

ಕನ್ನಡದ ಕುಳ್ಳ ಏಜೆಂಟ್ 000, ಬೆಂಗಳೂರ್ ಮೇಲ್, ರಕ್ತ ಕಣ್ಣೀರು, ಮಲಯಾಳಂನ ಇನ್ಸ್ ಪೆಕ್ಟರ್, ಮನುಷ್ಯಮೃಗಂ, ಹಿಂದಿಯ ಪಿಸ್ಟೂಲ್ ವಾಲಿ ಸೇರಿದಂತೆ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

Trending videos

Back to Top