ಬರ್ಲಿನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಪ್ರಿಯಾಂಕಾ ಚೋಪ್ರಾ ಭೇಟಿ
Team Udayavani, May 30, 2017, 4:00 PM IST
ಬರ್ಲಿನ್: ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬರ್ಲಿನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ; ಮೋದಿ ಜತೆಗೆ ಕುಶಲೋಪರಿ ನಡೆಸುತ್ತಿರುವ ತನ್ನ ಫೋಟೋವನ್ನು ಆಕೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ.
“ಇಂದು ಬೆಳಗ್ಗೆ ನಿಮ್ಮನ್ನು ಭೇಟಿಯಾಗುವುದಕ್ಕೆ ನನಗೆ ಸಮಯಾವಕಾಶ ನೀಡಿರುವುದಕ್ಕೆ ಧನ್ಯವಾದಗಳು. ನಾನೂ ನೀವೂ ಬರ್ಲಿನ್ನಲ್ಲಿ ಏಕಕಾಲದಲ್ಲಿದ್ದುಕೊಂಡು ಪರಸ್ಪರರನ್ನು ಭೇಟಿಯಾಗಿರುವುದು ನಿಜಕ್ಕೂ ಸಂತಸದ, ಕಾಕತಾಳೀಯ ಘಟನೆಯಾಗಿದೆ’ ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿ ಹಾಲಿವುಡ್ನಲ್ಲೂ ತಮ್ಮ ಚೊಚ್ಚಲ “Baywatch’ ಚಿತ್ರದ ಮೂಲಕ ಸುದ್ದಿ ಮಾಡುತ್ತಿರುವ ಪ್ರಿಯಾಂಕಾ ತಮ್ಮ ಹೊಸ ಚಿತ್ರದ ಪ್ರಚಾರಾರ್ಥವಾಗಿ ಪ್ರಕೃತ ಬರ್ಲಿನ್ನಲ್ಲಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಕೂಡ ಆರು ದಿನಗಳ ನಾಲ್ಕು ರಾಷ್ಟ್ರಗಳ (ಜರ್ಮನಿ, ಸ್ಪೇನ್, ರಶ್ಯ ಮತ್ತು ಫ್ರಾನ್ಸ್) ಭೇಟಿಯಲ್ಲಿದ್ದು ಬರ್ಲಿನ್ನಲ್ಲಿರುವಾಗ ಪ್ರಿಯಾಂಕಾ ಅವರನ್ನು ಭೇಟಿಯಾಗಿದ್ದಾರೆ.
ಕ್ವಾಂಟಿಕೋ ಟಿವಿ ಧಾರಾವಾಹಿ ಮೂಲಕ ಪಾಶ್ಚಾತ್ಯ ದೇಶಗಳಲ್ಲಿ ಹೆಸರು ಮಾಡುತ್ತಿರುವ ಪ್ರಿಯಾಂಕಾ ಆಗೀಗ ಎಂಬಂತೆ ರತ್ನಗಂಬಳಿ ಸ್ವಾಗತದಲ್ಲಿ ಕಾಣಿಸಿಕೊಂಡು ಸುದ್ದಿಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ