ಗಣ್ಯಾತಿಗಣ್ಯರ ಸಮ್ಮುಖದಲ್ಲೇ ಕತ್ರಿನಾಗೆ ಮುತ್ತಿಟ್ಟ ಸಲ್ಲು!
Team Udayavani, Jul 15, 2017, 11:58 AM IST
ಬ್ರೇಕಪ್ ಆಗಿದ್ದ ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಪ್ರೇಮ ಪ್ರಸಂಗಕ್ಕೆ ಮರುಜೀವ ಸಿಕ್ಕಿದೆ ಎಂಬ ಮಾತುಗಳು ಬೀಟೌನ್ ನಲ್ಲಿ ಹರಿದಾಡುತ್ತಲಿವೆ. ಇದು ಕೇವಲ ಅಂತೆಕಂತೆಗಳ ಗಾಸಿಪ್ ಎಂದುಕೊಂಡವರೇ ಹೆಚ್ಚುಮಂದಿ. ಆದರೆ ಇದು ಸತ್ಯ ಎಂದವರು ಅನೇಕರು. ಈ ಲವ್ ಕಥೆಗೆ ಪುಷ್ಟಿ ನೀಡುವ ಪ್ರಸಂಗವೊಂದಕ್ಕೆ ಮುಂಬೈ ಸಾಕ್ಷಿಯಾಯಿತು.
ಭಾನುವಾರ ಮುಂಬೈನಲ್ಲಿ ನಡೆದ ನಟಿ ಕತ್ರಿನಾ ಕೈಫ್ ಅವರ 34ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಬಾಲಿವುಡ್ ಗಣ್ಯರೇನೇಕರು ಪಾಲ್ಗೊಂಡು ಕೈಫ್ ಗೆ ವಿಶ್ ಮಾಡಿದರು. ನಟ ಸಲ್ಮಾನ್ ಖಾನ್ ಕೂಡಾ ತನ್ನ ಮಾಜಿ ಪ್ರೇಯಸಿಯ ಸಮಾರಂಭದಲ್ಲಿ ಪಾಲ್ಗೊಂಡು ಶುಭಹಾರೈಸಿದರು. ಅದೆಂಥಾ ವಿಶ್ ಅಂತೀರಾ? ಬಾಲಿವುಡ್ ಗಣ್ಯಾತಿಗಣ್ಯರ ಸಮ್ಮುಖದಲ್ಲೇ ಸಲ್ಮಾನ್ ಅವರು ಕತ್ರಿನಾರ ಎರಡೂ ಕೆನ್ನೆಗೆ ಮುತ್ತಿಟ್ಟರು.
ಸಲ್ಮಾನ್ ಅವರ ಈ ರೀತಿಯ ವಿಶ್ ಗೆ ಕತ್ರಿನಾ ಕೂಡಾ ನಯವಾಗಿಯೇ ಸ್ಪಂದಿಸಿ ಮುಗುಳುನಗೆ ಬೀರಿದರು. ಈ ತಾರಾ ಜೋಡಿ ನಡುವೆ ಮತ್ತೆ ಪ್ರೇಮಾಯಣ ಆರಂಭವಾಗಿದೆ ಎಂಬ ಸುದ್ದಿಗಳಿಗೆ ಈ ಪ್ರಸಂಗ ಸಾಕ್ಷಿಯಾಯಿತು.
ಕೆಲ ದಿನಗಳ ಹಿಂದೆ ಐಫಾ 2017 ಪ್ರಶಸ್ತಿ ಕಾರ್ಯಕ್ರಮದಲ್ಲಿ ಕತ್ರಿನಾ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ಕಾಣಿಸಿಕೊಂಡು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು. ಆಗಲೇ ಇವರಿಬ್ಬರ ಪ್ರೇಮ ಪ್ರಸಂಗ ಬಗ್ಗೆ ಸುದ್ದಿಯಾಯಿತು. ಇದೀಗ ಸಲ್ಮಾನ್ ಅವರಿತ್ತ ಮುತ್ತು ಈ ಸುದ್ದಿಗೆ ಗುದ್ದು ಕೊಟ್ಟಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ