CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬೂಸನ್‌ ಚಿತ್ರೋತ್ಸವಕ್ಕೆ "ಅಜ್ಜಿ'ಗೆ ಆಹ್ವಾನ! 

ಮುಂಬಯಿ: ದ.ಕೊರಿಯಾದಲ್ಲಿ ನಡೆಯುವ ಪ್ರತಿಷ್ಠಿತ ಬೂಸನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ (ಬಿಐಎಫ್ಎಫ್)ಗೆ ದೇವಶಿಶ್‌ ಮುಖೀಜಾ ನಿರ್ದೇಶನದ "ಅಜ್ಜಿ' ಹಿಂದಿ ಚಿತ್ರ ಆಯ್ಕೆಯಾಗಿದೆ.  

ಯೋಡ್ಲಿ ಫಿಲಂಸ್‌ ನಿರ್ಮಾಣದ ಈ ಚಿತ್ರ, ಹೊಸ ತಲೆಮಾರಿನ ಚಿತ್ರ ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ಮುಂದಿನ ತಿಂಗಳು ಅಕ್ಟೋಬರ್‌ 12ರಿಂದ 21ರ ವರೆಗೆ ಈ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯಲಿದೆ. 

9 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಸಮಾಜ ನ್ಯಾಯ ಒದಗಿಸಲು ವಿಫ‌ಲವಾದಾಗ ಆಕೆಯ ವೃದ್ಧೆ ಅಜ್ಜಿ, ಹೇಗೆ ನ್ಯಾಯವನ್ನು ಒದಗಿಸುತ್ತಾಳೆ ಎಂಬುದರ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ.  ಚಿತ್ರ ಸುಷ್ಮಾ ದೇಶಪಾಂಡೆ, ಶ್ರಾವಣಿ ಸೂರ್ಯವಂಶಿ, ಸಾದಿಯಾ ಸಿದ್ದಿಕಿ, ಅಭಿಷೇಕ್‌ ಬ್ಯಾನರ್ಜಿ, ಸ್ಮಿತಾ ತಾಂಬೆ ಅವರ ತಾರಾಗಣವನ್ನು ಹೊಂದಿದೆ.  "ಜಗತ್ತಿನ ಸಾವಿರಾರು ಚಿತ್ರಗಳಲ್ಲಿ ಹೊಸ ತಲೆಮಾರಿನ ಚಿತ್ರಗಳ ಪೈಕಿ ಚಿತ್ರೋತ್ಸವಕ್ಕೆ ಆಯ್ಕೆ ಯಾದ 10 ಚಿತ್ರಗಳಲ್ಲಿ ಇದೂ ಒಂದಾಗಿದ್ದು ಚಿತ್ರ ತಂಡಕ್ಕೆ ಹೆಮ್ಮೆಯಾಗಿದೆ ಎಂದು ಮುಖೀಜಾ ಹೇಳಿದ್ದಾರೆ. 
 

Back to Top