CONNECT WITH US  

ಆರ್‌ ಪಾರ್‌ ಚಿತ್ರದ ಖ್ಯಾತ ನಟಿ 82 ವರ್ಷದ ಶ್ಯಾಮಾ ವಿಧಿವಶ

ಹೊಸದಿಲ್ಲಿ : 'ಆರ್‌ಪಾರ್‌' ಹಿಂದಿ ಚಿತ್ರದ ಖ್ಯಾತ ನಟಿ ಶ್ಯಾಮಾ ಅವರು ನ.14ರಂದು ಬೆಳಗ್ಗೆ ನಿಧನಹೊಂದಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ತನ್ನ ಕಾಲದ ಅತ್ಯಂತ ಸುಂದರಿ ನಟಿ ಎಂಬ ಖ್ಯಾತಿಯನ್ನು ಶ್ಯಾಮಾ ಪಡೆದಿದ್ದರು.

ಶ್ಯಾಮಾ ನಿಧನದ ಸುದ್ದಿಯನ್ನು ನಟ ಜಾನಿ ವಾಕರ್‌ ಅವರ ಪುತ್ರ ನಸೀರ್‌ ಖಾನ್‌ ಅವರು ಇಂದು ಬುಧವಾರ ಮಾಧ್ಯಮಕ್ಕೆ ತಿಳಿಸಿದರು. 

''ಶ್ಯಾಮಾ ಅವರು ನನ್ನ ತಂದೆ ಜಾನಿ ವಾಕರ್‌ ಅವರೊಂದಿಗೆ ಅನೇಕ ಸಿನೇಮಾಗಳಲ್ಲಿ ಹೀರೋಯಿನ್‌ ಆಗಿ ನಟಿಸಿದ್ದರು. ಜಾನಿ ವಾಕರ್‌ ಹೆಸರಿನ ಸಿನೇಮಾದಲ್ಲಿ ಆಕೆಯೇ ಹೀರೋಯಿನ್‌ ಆಗಿದ್ದರು'' ಎಂದು ತಿಳಿಸಿರುವ ಜಾನಿ ವಾಕರ್‌ ಪುತ್ರ ನಸೀರ್‌ ಖಾನ್‌ ಅವರು ಶ್ಯಾಮಾ ನಿಧನಕ್ಕೆ ಶೋಕ, ಸಂತಾಪ ವ್ಯಕ್ತಪಡಿಸಿದರು. 

ನಟಿ ಶ್ಯಾಮಾ ಅವರು 1953ರಲ್ಲಿ ಪ್ರಖ್ಯಾತ ಸಿನೇಮಾಟೋಗ್ರಾಫ‌ರ್‌ ಫಾಲಿ ಮಿಸ್ತ್ರೀ ಅವರನ್ನು ವಿವಾಹವಾಗಿದ್ದರು. ಶ್ಯಾಮಾ ಅವರಿಗೆ ಮೂವರು ಮಕ್ಕಳಿದ್ದಾರೆ. ಅವರೆಂದರೆ ಫಾರೂಕ್‌, ಶಿರಿನ್‌ ಮತ್ತು ರೋಹಿನ್‌ 

Trending videos

Back to Top