CONNECT WITH US  

ಪ್ರತಿ ದಿನ 10 ಕಿಮಿ ಸೈಕಲ್‌ ತುಳಿಯುತ್ತಿದ್ದರಂತೆ ಸಲ್ಮಾನ್‌

ಟೈಗರ್‌ ಜಿಂದಾ ಹೇಗೆ ಫಿಟ್‌ ಆಗಿರಲು ಸತತ ಪ್ರಯತ್ನ

ಸಲ್ಮಾನ್‌ ಖಾನ್‌ ಮತ್ತು ಕತ್ರೀನಾ ಕೈಫ್ ಅಭಿನಯದ "ಟೈಗರ್‌ ಜಿಂದಾ ಹೇ' ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಇದೇ ತಿಂಗಳ 22ರಂದು ಜಗತ್ತಿನಾದ್ಯಂತೆ ಬಿಡುಗಡೆಯಾಗಲಿದೆ. ಅಂದ ಹಾಗೆ, ಚಿತ್ರದ ಪೋಸ್ಟರ್‌ಗಳು ಮತ್ತು ಟ್ರೇಲರ್‌ ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ಸಲ್ಮಾನ್‌ ಖಾನ್‌ ಅವರ ದೈಹಿಕ ದೃಢತೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಈ ಚಿತ್ರದಲ್ಲಿ ಸೂಪರ್‌ ಸ್ಪೈ ಆಗಿ ಕಾಣಿಸಿಕೊಂಡಿರುವ ಸಲ್ಮಾನ್‌ ಖಾನ್‌, ತಮ್ಮ ದೇಹವನ್ನು ಈ ಚಿತ್ರಕ್ಕಾಗಿಯೇ ಹುರಿಗೊಳಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್‌ ಬೆರಗುಗೊಳಿಸುವಂತಹ ಮತ್ತು ಸಾವಿಗೆ ಸವಾಲೆಸೆಯುವಂತಹ ಸ್ಟಂಟ್‌ಗಳಲ್ಲಿ ಕಾಣಿಸಿಕೊಂಡಿದ್ದು, ಆ ಎಲ್ಲಾ ಸ್ಟಂಟ್‌ಗಳನ್ನು ಅವರೇ ನಿರ್ವಹಿಸಿದ್ದಾರಂತೆ. ಈ ಚಿತ್ರಕ್ಕಾಗಿ ದೈಹಿಕ ದೃಢತೆಯನ್ನು ಉಳಿಸಿಕೊಳ್ಳಬೇಕಿದ್ದರಿಂದ, ವ್ಯಾಯಾಮದ ಜೊತೆಗೆ ಪ್ರತಿದಿನ ಸೈಕಲ್‌ ಸವಾರಿ ಮಾಡುತ್ತಿದ್ದರಂತೆ ಸಲ್ಮಾನ್‌.

ಪ್ರತಿ ದಿನ ಸೆಟ್‌ಗೆ ಸೈಕಲ್‌ನಲ್ಲಿ ಬರುತ್ತಿದ್ದ ಸಲ್ಮಾನ್‌, ಸೆಟ್‌ ತಲುಪುವುದಕ್ಕೆ 10 ಕಿಲೋಮೀಟರ್‌ ಸೈಕಲ್‌ ತುಳಿಯುತ್ತಿದ್ದರಂತೆ. ಇನ್ನು ಆಹಾರಕ್ರಮದ ಮೇಲೂ ತೀವ್ರ ನಿಗಾ ಇಟ್ಟಿದ್ದ ಅವರು, ತಮ್ಮ ದೈಹಿಕ ದೃಢತೆಗೆ ಸಮಸ್ಯೆಯಾಗುವಂತಹ ಯಾವುದೇ ಆಹಾರ ಸೇವಿಸುತ್ತಿರಲಿಲ್ಲವಂತೆ. ಗ್ರೀಸ್‌ನಲ್ಲಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸಂದರ್ಭದಲ್ಲಿ ಮಾತ್ರ ಅವರು ಮನಸ್ಸಿಗೆ ಬಂದಂತೆ ತಿಂತಿದ್ದಾರಂತೆ.

"ಟೈಗರ್‌ ಜಿಂದಾ ಹೇ' ಚಿತ್ರದಲ್ಲಿ ಸಲ್ಮಾನ್‌ ಮತ್ತು ಕತ್ರೀನಾ ಕೈಫ್ ಜೊತೆಗೆ ಅಂಗದ್‌ ಬೇಡಿ, ಕುಮುದು ಮಿಶ್ರಾ ಮುಂತಾದವರು ನಟಿಸಿದ್ದಾರೆ. "ಸುಲ್ತಾನ್‌' ನಿರ್ದೇಶಿಸಿದ್ದ ಅಲಿ ಅಬ್ಟಾಸ್‌ ಜಫ‌ರ್‌ ಈ ಚಿತ್ರವನ್ನು ನಿರ್ದೇಶಿಸಿದರೆ, ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Back to Top