ಕೊಹ್ಲಿ - ಅನುಷ್ಕಾ ಮದುವೆ ವದಂತಿ ಶುದ್ಧ ಸುಳ್ಳು : ವಕ್ತಾರ | Udayavani - ಉದಯವಾಣಿ
   CONNECT WITH US  
echo "sudina logo";

ಕೊಹ್ಲಿ - ಅನುಷ್ಕಾ ಮದುವೆ ವದಂತಿ ಶುದ್ಧ ಸುಳ್ಳು : ವಕ್ತಾರ

ಹೊಸದಿಲ್ಲಿ : ಮೂರು ಟೆಸ್ಟ್‌ ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಗೆದ್ದ ಹೊರತಾಗಿಯೂ ಪ್ರವಾಸಿ ಲಂಕೆ ಎದುರಿನ ಮೂರನೇ ಹಾಗೂ ಕೊನೇ ಟೆಸ್ಟ್‌ ಪಂದ್ಯ ಡ್ರಾ ಅದುದರಲ್ಲೇ ಭಾರತ ತೃಪ್ತಿಪಟ್ಟ ನಡುವೆಯೇ ಇಂದು ಬುಧವಾರ ಮತ್ತೆ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮದುವೆ ಕುರಿತ ವದಂತಿಗಳು ಮತ್ತೆ ಗರಿಗೆದರಿದವು.

ಇದೇ ಡಿ.11 - 13ರಂದು ಮಿಲಾನ್‌ನಲ್ಲಿ ಕೊಹ್ಲಿ-ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಹೊಸ ವದಂತಿಯನ್ನು ಅವರ ವಕ್ತಾರ ತಿರಸ್ಕರಿಸಿ,  "ಈ ವದಂತಿಯಲ್ಲಿ ಸತ್ಯದ ಲವಲೇಶವೂ ಇಲ್ಲ' ಎಂದು ಖಂಡತುಂಡವಾಗಿ ಹೇಳಿ ವದಂತಿಯ ಬಲೂನಿಗೆ ಸೂಜಿ ಚುಚ್ಚಿದರು. 

ಮುಂದಿನ ವರ್ಷ ಭಾರತ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಲಂಕಾ ಎದುರಿನ ಮುಂಬರುವ ಏಕದಿನ ಸರಣಿಗೆ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇದುವೇ ಕೊಹ್ಲಿ-ಅನುಷ್ಕಾ ಸಂಭವನೀಯ ಮದುವೆಯ ವದಂತಿಗೆ ಕಾರಣವಾಗಿತ್ತು.

ದಕ್ಷಿಣ ಆಫ್ರಿಕ ಸರಣಿಗೆ ಮುನ್ನವೇ ಕೊಹ್ಲಿ, ನಟಿ ಅನುಷ್ಕಾ ಅವರನ್ನು ಮದುವೆ ಆಗುತ್ತಾರೆ ಎಂಬ ವದಂತಿಗಳಿಗೆ ಅವರ ವಿಶ್ರಾಂತಿಯೇ ರೆಕ್ಕೆ ಪುಕ್ಕ ಅಂಟಿಸಿತ್ತು. ಟಿವಿ ಚ್ಯಾನಲ್‌ಗ‌ಳು ಕೂಡ ಕೊಹ್ಲಿ - ಅನುಷ್ಕಾ ಡಿಸೆಂಬರ್‌ನಲ್ಲಿ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ ಎಂಬ ವರದಿಗಳನ್ನು ಪ್ರಸಾರಿಸಿದ್ದವು. ಆಗ ಒಡನೆಯೇ ಕೊಹ್ಲಿ - ಅನುಷ್ಕಾ ವಕ್ತಾರರಿಂದ ಈ ವದಂತಿಗಳು ನೂರಕ್ಕೆ ನೂರು ಸುಳ್ಳು ಎಂಬ ಸ್ಪಷ್ಟನೆ ಕೇಳಿ ಬಂತು. 

Trending videos

Back to Top