ಸಲ್ಮಾನ್ ಖಾನ್ ‘ಟೈಗರ್ ಜಿಂದಾ ಹೈ’ ಈಗ 300 ಕೋಟಿಗೆ ನಿಕಟ
Team Udayavani, Jan 6, 2018, 7:25 PM IST
ಹೊಸದಿಲ್ಲಿ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ನಟನೆಯ ‘ಟೈಗರ್ ಜಿಂದಾ ಹೈ’ ಚಿತ್ರ ಇದೀಗ 300 ಕೋಟಿ ರೂ. ಬಾಕ್ಸ್ ಆಫೀಸ್ ಗಳಿಕೆಗೆ ಅತ್ಯಂತ ನಿಕಟವಾಗಿದೆ.
‘ಟೈಗರ್ ಜಿಂದಾ ಹೈ’ ಚಿತ್ರ ಬಿಡುಗಡೆಗೊಂಡ ಇಂದಿನ 16ನೇ ದಿನ ಇದರ ಬಾಕ್ಸ್ ಆಫೀಸ್ ಗಳಿಕೆ 295.27 ಕೋಟಿ ರೂ. ಆಗಿದೆ. ಬಹುಷಃ ಇಂದೇ ಅಥವಾ ಇನ್ನೊಂದು ದಿನದ ಒಳಗೆ ಅದು 300 ಕೋಟಿ ದಾಟುವುದು ಬಹುತೇಕ ಖಚಿತವಿದೆ ಎಂದು ಬಾಲಿವುಡ್ ಚಿತ್ರರಂಗ ವಿಶ್ಲೇಷಕ ಮತ್ತು ವಿಮರ್ಶಕ ತರಣ್ ಆದರ್ಶ್ ಹೇಳಿದ್ದಾರೆ.
ಟೈಗರ್ ಜಿಂದಾ ಹೈ ಚಿತ್ರ 100 ಕೋಟಿ ದಾಟಿದ ಸಾಧನೆ ಮಾಡಿರುವ ಸಲ್ಮಾನ್ಖಾನ್ ಅವರ 12ನೇ ಬಾಲಿವುಡ್ ಚಿತ್ರವಾಗಿದೆ.
ಈಗಿನ ಸ್ಥಿತಿ ನೋಡಿದರೆ ಟೈಗರ್ ಜಿಂದಾ ಹೈ ಚಿತ್ರ ಸಲ್ಮಾನ್ ಖಾನ್ ಅವರ ಈ ಹಿಂದಿನ ಬಜರಂಗಿ ಭಾಯಿಜಾನ್ (320.34 ಕೋಟಿ) ಮತ್ತು ಸುಲ್ತಾನ್ (300.45 ಕೋಟಿ) ಬಾಕ್ಸ್ ಆಫೀಸ್ ಗಳಿಕೆಯನ್ನು ಹಿಂದಿಕ್ಕುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ ಎಂದು ತರಣ್ ಆದರ್ಶ್ ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ