CONNECT WITH US  

ಬಿಕಿನಿ ತೊಟ್ಟು ಟ್ರೋಲ್ ಆದ ರಾಧಿಕಾ ಆಪ್ಟೆ ಹೇಳಿದ್ದೇನು ಗೊತ್ತಾ?

ಮುಂಬೈ: ಬಾಲಿವುಡ್ ನ ಬಿಂದಾಸ್ ನಟಿ ರಾಧಿಕಾ ಆಪ್ಟೆ ತಮ್ಮ ಲೀಲಾಜಾಲ ನಟನೆಯ ಮೂಲಕ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟಾಕೆ..ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದ ಬಿಕಿನಿ ತೊಟ್ಟ ಪೋಟೋಗಳು ಟ್ರೋಲ್ ಆಗಿದೆ.

ರಾಧಿಕಾ ಆಪ್ಟೆ ಗೆಳೆಯನ ಜೊತೆ ಗೋವಾ ಬೀಚ್ ನಲ್ಲಿ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದ ಪೋಟೋವನ್ನು ಶೇರ್ ಮಾಡಿದ್ದರು. ಆದರೆ ಬಿಕಿನಿ ತೊಟ್ಟ ಆಪ್ಟೆಯನ್ನು ಟ್ರೋಲ್ ಮಾಡುವ ಮೂಲಕ ಕಟುವಾಗಿ ಟೀಕಿಸಿದ್ದರು.

ಆದರೆ ಟ್ರೋಲ್ ಬಗ್ಗೆ ಆಪ್ಟೆ ಹೆಚ್ಚೇನೂ ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಸಿನಿಮಾ ನಟಿಯರ ಬಟ್ಟೆಯ ಆಯ್ಕೆ ವಿಚಾರ ಸೇರಿದಂತೆ ಸೆಲೆಬ್ರಿಟಿಗಳು ಇತ್ತೀಚೆಗೆ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.

ಟ್ರೋಲ್ ಆದ ಬಗ್ಗೆ ಡಿಎನ್ ಎ ಆಪ್ಟೆಯನ್ನು ಪ್ರಶ್ನಿಸಿದಾಗ, ನನ್ನ ಟ್ರೋಲ್ ಮಾಡಿದ್ದಾರೆಂಬ ವಿಷಯ ಬೇರೆಯವರು ಹೇಳುವವರೆಗೂ ನನಗೆ ಗೊತ್ತೇ ಇರಲಿಲ್ಲವಾಗಿತ್ತು. ಇದು ಹಾಸ್ಯಾಸ್ಪದ..ನಾನು ಬೀಚ್ ನಲ್ಲಿದ್ದಾಗಲೂ ಸೀರೆ ತೊಟ್ಟಿರಬೇಕೆಂದು ಜನ ನಿರೀಕ್ಷಿಸುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ನನಗೆ ಅದರ ಬಗ್ಗೆ ಗೊತ್ತಿಲ್ಲ, ಆ ಬಗ್ಗೆ ಯಾವ ಸಮಜಾಯಿಷಿಯೂ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುವುದು ರಾಧಿಕಾ ಆಪ್ಟೆ ಮೊದಲಿಗಳಲ್ಲ, ಈಗಾಗಲೇ ಪ್ರಿಯಾಂಕಾ ಚೋಪ್ರಾ, ತಾಪ್ಸೆ, ಈಶಾ ಗುಪ್ತಾ, ದೀಪಿಕಾ ಪಡುಕೋಣೆ, ಪ್ರಣೀತಿ ಚೋಪ್ರಾ ಕೂಡಾ ಟ್ರೋಲ್ ಆಗಿದ್ದರು.

Trending videos

Back to Top