CONNECT WITH US  

ಪತಿ ವಿರುದ್ಧ  ವಂಚನೆ, ಕಿರುಕುಳ ದೂರು ದಾಖಲಿಸಿದ ನಟಿ ಚೈತ್ರಾ 

ಬೆಂಗಳೂರು: ಖುಷಿ ಚಿತ್ರದ ಮೂವರು ನಾಯಕಿಯಲ್ಲಿ ಒಬ್ಬರಾಗಿದ್ದ ಚೈತ್ರಾ ಅವರು ಪತಿಯ ವಿರುದ್ಧ ಕಿರುಕುಳ ನೀಡಿರುವ ದೂರು ದಾಖಲಿಸಿ ಸುದ್ದಿಯಾಗಿದ್ದಾರೆ. 

ಬಸವನಗುಡಿ ಮಹಿಲಾ ಠಾಣೆಗೆ ನೀಡಿರುವ ದೂರಿನಲ್ಲಿ ನನ್ನ ಪತಿ ಬಾಲಾಜಿ ಪೋತ್‌ರಾಜ್‌ ಯುವತಿಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಈ ವಿಚಾರ ಪ್ರಶ್ನಿಸಿದ್ದಕ್ಕೆ ನನಗೆ ಥಳಿಸಿದ್ದಾರೆ. ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಚೈತ್ರಾ ಅವರು ಬಾಲಾಜಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರೂ ಜಂಟಿಯಾಗಿ ಧಾರಾವಾಹಿಯೊಂದನ್ನೂ ನಿರ್ಮಿಸಿದ್ದು ಅಲ್ಲಿ ಬಂದ ಹಣದಲ್ಲೂ ನನಗೆ ವಂಚನೆ ಆಗಿದೆ ಎಂದು ಚೈತ್ರಾ ಹೇಳಿಕೊಂಡಿದ್ದಾರೆ. 

Trending videos

Back to Top