ಬಿಗ್ ಬಿ ಅಂಡ್ ರಿಷಿ ಕಪೂರ್! “102 ನಾಟ್ ಔಟ್” ಪೋಸ್ಟರ್ ರಿಲೀಸ್
Team Udayavani, Mar 23, 2018, 4:09 PM IST
ನವದೆಹಲಿ: ಸರಿಸುಮಾರು 27 ವರ್ಷಗಳ ಬಳಿಕ ಬಾಲಿವುಡ್ ಹಿರಿಯ ನಟರಾದ ರಿಷಿ ಕಪೂರ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಜತೆಯಾಗಿ “102 ನಾಟ್ ಔಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರಬಿದ್ದಿದೆ.
ಗುಜರಾತಿ ನಾಟಕ ಆಧಾರಿತ 102 ನಾಟ್ ಔಟ್ ಸಿನಿಮಾವನ್ನು ಉಮೇಶ್ ಶುಕ್ಲಾ ನಿರ್ದೇಶಿಸುತ್ತಿದ್ದಾರೆ. ಸೌಮ್ಯ ಜೋಶಿ ಅವರು ಬರೆದು ನಿರ್ದೇಶಿಸಿದ್ದ ಗುಜರಾತಿ ಕಥೆ ಇದಾಗಿದೆ. 102 ನಾಟ್ ಔಟ್ ತಂದೆ, ಮಗನ ಬಾಂಧವ್ಯದ ಕಾಮಿಡಿ ಸಿನಿಮಾವಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ 1ನಿಮಿಷದ ಟೀಸರ್ ನಲ್ಲಿ ಬಿಗ್ ಬಿ ಹಾಗೂ ರಿಷಿ ಕಪೂರ್ ಅವರನ್ನು ವಿವಿಧ ಗೆಟಪ್ ನಲ್ಲಿ ತೋರಿಸಲಾಗಿದೆ.
ಮಗನ(ರಿಷಿ ಕಪೂರ್) ಬಗ್ಗೆ ವಿಶೇಷ ಕಾಳಜಿ ವಹಿಸುವ ತಂದೆಯ(ಅಮಿತಾಬ್) ಪಾತ್ರದಲ್ಲಿ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೇ 4ರಂದು ತೆರೆಗೆ ಬರಲು ಸಿದ್ದವಾಗಿದೆ.
ಬಾಲಿವುಡ್ ನಲ್ಲಿ ಸಿನಿ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದ ಈ ಜೋಡಿ 1976ರಲ್ಲಿ ಬಿಡುಗಡೆಯಾಗಿದ್ದ ಕಭೀ ಕಭೀ, ಅಮರ್ ಅಕ್ಬರ್ ಅಂಥೋನಿ(1977), ನಸೀಬ್(1981), ಕೂಲಿ(1983) ಹಾಗೂ ಅಜೂಬಾ(1991) ಸಿನಿಮಾದಲ್ಲಿ ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ