CONNECT WITH US  

5 ಕೋಟಿ ಸಾಲ: ನಟ ರಾಜಪಾಲ್‌ ಯಾದವ್‌, ಪತ್ನಿಗೆ ಎ.23ರಂದು ಶಿಕ್ಷೆ

ಹೊಸದಿಲ್ಲಿ : 2010ರಲ್ಲಿ  "ಅತಾ ಪತಾ ಲಾಪತಾ'' ಎಂಬ ತನ್ನ ಚೊಚ್ಚಲ ನಿರ್ದೇಶನದ ಹಿಂದಿ ಚಲನಚಿತ್ರದ ನಿರ್ಮಾಣಕ್ಕಾಗಿ ದಿಲ್ಲಿ ಉದ್ಯಮಿಯೊಬ್ಬರಿಂದ ಪಡೆದಿದ್ದ 5 ಕೋಟಿ ರೂ. ಸಾಲದ ವಸೂಲಾತಿ ದಾವೆಯಲ್ಲಿ  ಬಾಲಿವುಡ್‌ ನಟ ರಾಜಪಾಲ್‌ ಯಾದವ್‌ ಮತ್ತು ಆತನ ಪತ್ನಿ ದೋಷಿಗಳೆಂದು ನ್ಯಾಯಾಲಯ ಹೇಳಿದ್ದು ಶಿಕ್ಷೆಯ ಪ್ರಮಾಣ ಎ.23ರಂದು ಪ್ರಕಟವಾಗಲಿದೆ.

ಬಾಲಿವುಡ್‌ ನಟ ಯಾದವ್‌ ಮತ್ತು ಆತನ ಪತ್ನಿ ರಾಧಾ ಅವರು 2010ರಲ್ಲಿ ದಿಲ್ಲಿ ಉದ್ಯಮಿ, ಮುರಳಿ ಪ್ರಾಜೆಕ್ಟ್ ಮಾಲಕ ಎಂ ಜಿ ಅಗರ್‌ವಾಲ್‌ ಅವರಿಂದ  ಸಾಲ ಪಡೆದಿದ್ದರು. ಈ ಸಾಲ ಮರುಪಾವತಿಯಾಗದ ಕಾರಣಕ್ಕೆ ದಿಲ್ಲಿ ಉದ್ಯಮಿ, ಯಾದವ್‌ ಮತ್ತು ಆತನಪತ್ನಿ ವಿರುದ್ಧ  ದಿಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. 

ಈ ಕೇಸಿಗೆ ಸಂಬಂಧಿಸಿ 2013ರಲ್ಲಿ ಯಾದವ್‌ಗೆ, ಕೇಸಿನ ನಿಜಾಂಶಗಳನ್ನು  ಮುಚ್ಚಿಟ್ಟ ಕಾರಣಕ್ಕೆ,  10 ದಿನಗಳ ನ್ಯಾಯಾಂಗ ಬಂಧನವಾಗಿತ್ತು. ಆಗಲೇ ಕೋರ್ಟ್‌, ಯಾದವ್‌ ದಂಪತಿಯ ಆಸ್ತಿಪಾಸ್ತಿ ಮುಟ್ಟುಗೋಲಿಗೆ, ಬ್ಯಾಂಕ್‌ ಖಾತೆ ಸ್ತಂಭನಕ್ಕೆ ಮತ್ತು ಅವರ ಒಡೆತನದ ಕಂಪೆನಿಯೊಂದರ ನಿಲುಗಡೆಗೆ ಆದೇಶಿಸಿತ್ತು. 

ಯಾದವ್‌ ಅವರು ಕಾಮಿಡಿ ನಟನಾಗಿ ಹೆಸರು ಮಾಡಿದ್ದು ಅವರ ನಟನೆಯ ಭೂಲ್‌ಭುಲಯ್ಯ, ಪಾರ್ಟ್‌ನರ್‌, ಹಂಗಾಮಾ ಚಿತ್ರಗಳು ಯಶಸ್ವಿಯಾಗಿದೆ. 

Trending videos

Back to Top