CONNECT WITH US  

ಹಿರಿಯ ಬಾಲಿವುಡ್‌ ನಟಿ ಮುಮ್ತಾಜ್‌ ಸಾವಿನ ಹುಸಿ ಸುದ್ದಿ ವೈರಲ್‌ !

ಮುಂಬಯಿ: ಸಾಮಾಜಿಕ ತಾಣಗಳಲ್ಲಿ ಸೆಲೆಬ್ರಿಟಿಗಳ ಹುಸಿ ಸಾವಿನ ಸುದ್ದಿ ವೈರಲ್‌ ಆಗುತ್ತಿರುವುದು ಮುಂದುವರಿದಿದೆ. ಇದೀಗ ಬಾಲಿವುಡ್‌ನ‌ ಹಿರಿಯ ನಟಿ ಮುಮ್ತಾಜ್‌ ಸಾವನ್ನಪ್ಪಿದ್ದಾರೆ ಎನ್ನುವ ಹುಸಿ ಸುದ್ದಿ  ವೈರಲ್‌ ಆಗಿದೆ. 

ಸುದ್ದಿ ಗಮನಕ್ಕೆ ಬರುತ್ತಿದ್ದಂತೆ 70 ರ ಹರೆಯದ ಮುಮ್ತಾಜ್‌ ಅವರ ಪುತ್ರಿ ತನ್ಯಾ ಮಧ್ವಾನಿ ಅವರು ಇದು ಸುಳ್ಳು ಸುದ್ದಿ ಎಂದು ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದು , ನನ್ನ ತಾಯಿ ಆರೋಗ್ಯವಾಗಿದ್ದು ನಮ್ಮೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ ಎಂದು ಮುಮ್ತಾಜ್‌ ಅವರ ನಗುಮೊಗದ ಫೋಟೋ ಸಮೇತ ಪೋಸ್ಟ್‌ ಮಾಡಿದ್ದಾರೆ. 

ಮುಮ್ತಾಜ್‌ ಅವರು ಸದ್ಯ ಲಂಡನ್‌ನಲ್ಲಿ  ಕುಟುಂಬದೊಂದಿಗೆ ನೆಲೆಸಿದ್ದಾರೆ. 
ಮೇಲಾ, ಅಪ್‌ರಾಧ್‌ , ನಾಗಿನ್‌, ಬ್ರಹ್ಮಾಚಾರಿ , ರಾಮ್‌ ಔರ್‌ ಶ್ಯಾಮ್‌, ದೋ ರಾಸ್ತೆ, ಖೀಲಾನೆಯಂತಹ ಹಿಟ್‌ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. 
 

Trending videos

Back to Top