CONNECT WITH US  

30ರ ಹುಟ್ಟುಹಬ್ಬದಂದು ನಟಿ ಅನುಷ್ಕಾ ಶರ್ಮಾ ನಿರ್ಧಾರ ಏನು ಗೊತ್ತಾ ?

ಮುಂಬಯಿ : ಬಾಲಿವುಡ್‌ ನಟಿ, ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ, ಅನುಷ್ಕಾ ಶರ್ಮಾ ಗೆ ಈಗ 30ರ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಆಕೆ ಒಂದು ಮಹತ್ತರ ನಿರ್ಧಾರ ಮಾಡಿದ್ದಾರೆ. ಮುಂಬಯಿ ಹೊರವಲಯದಲ್ಲಿ  ಬೀದಿಗಳಲ್ಲಿ ಅನಾಥವಾಗಿ ಅಡ್ಡಾಡಿಕೊಂಡಿರುವ ಪ್ರಾಣಿ ಪಶುಗಳಿಗಾಗಿ ಆಸರೆ ಕೇಂದ್ರವೊಂದನ್ನು ತಾನು ನಿರ್ಮಿಸುವುದಾಗಿ ಹೇಳಿದ್ದಾರೆ.

ಅಂದ ಹಾಗೆ ಅನುಷ್ಕಾ ಅಪ್ಪಟ ಪಶು ಪ್ರೇಮಿ. ಬೀದಿಗಳಲ್ಲಿ ಅನಾಥವಾಗಿ ಓಡಾಡಿಕೊಂಡಿರುವ ನಾಯಿ, ಪಶುಗಳಿಗೆ ತಾನು ಏನಾದರೂ ಮಾಡಬೇಕು ಎಂದು ಆಕೆ ಸದಾ ಕನಸು ಕಾಣುತ್ತಿದ್ದಳಂತೆ. 

"ಮುಂಬಯಿ ಹೊರವಲಯದಲ್ಲಿ ನಾನೊಂದು ಪಶು ಆಸರೆ ಕೇಂದ್ರವನ್ನು ನಿರ್ಮಿಸಲು ನಿರ್ಧರಿಸಿದ್ದೇನೆ. ಅನಾಥವಾಗಿ, ಯಾರಿಗೂ ಬೇಡವಾಗಿ, ಬೀದಿಗಳಲ್ಲಿ  ಅತ್ಯಂತ ಕಠಿನ ಸ್ಥಿತಿಯಲ್ಲಿ  ಅಡ್ಡಾಡಿಕೊಂಡಿರುವ ಮೂಕ ಪ್ರಾಣಿ ಪಶುಗಳಿಗೆ ಪ್ರೀತಿ, ರಕ್ಷಣೆ, ಪೋಷಣೆ ಸಿಗುವ ಕೇಂದ್ರ ಅದಾಗಿರುತ್ತದೆ' ಎಂದು ಅನುಷ್ಕಾ ಹೇಳಿದ್ದಾರೆ. 

ಮನುಷ್ಯರ ಹಾಗೆ ಬಲಿಷ್ಠವಲ್ಲದ ಮೂಕ ಪ್ರಾಣಿಗಳ ಬಗ್ಗೆ ಜನರು ದಯೆತೋರಿ ಅವುಗಳನ್ನು ರಕ್ಷಿಸಿ ಪೋಷಿಸುವ ಆಸಕ್ತಿಯನ್ನು ಜನರು ತೋರಬೇಕು ಎಂದು "ಪರೀ'' ಖ್ಯಾತಿಯ ನಟಿ ಅನುಷ್ಠಾ ಆಗ್ರಹಿಸಿದ್ದಾರೆ. 

ಪಶು ಪ್ರಾಣಿ ಆಸರೆ ಕೇಂದ್ರವನ್ನು ನಿರ್ಮಿಸುವ ತನಗೆ ಟಿಬೆಟ್‌ ಧರ್ಮಗುರು ದಲಾಯಿ ಲಾಮಾ ಪ್ರೇರಣೆಯಾಗಿದ್ದಾರೆ ಎಂದು ಅನುಷ್ಕಾ ಹೇಳಿದ್ದಾರೆ. 

ಅನುಷ್ಕಾ ಶರ್ಮಾ ಪ್ರಕೃತ ಯಶ್‌ ರಾಜ್‌ ಫಿಲಂಸ್‌ನಲ್ಲಿ  ವರುಣ್‌ ಧವನ್‌ ಎದುರು "ಸೂಯಿ ಧಾಗಾ' ಚಿತ್ರದಲ್ಲಿ ಮತ್ತು ಶಾರುಖ್‌ ಖಾನ್‌ ಎದುರು "ಝೀರೋ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Trending videos

Back to Top