CONNECT WITH US  

"ಅಲ್ಲಾ ದುಹಾಯಿ ಹೈ' ಸಾಂಗ್‍ಗೆ ಸಿನಿಪ್ರಿಯರ ಉಘೇ ಉಘೇ: Watch

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಯನದ ಬಹುನಿರೀಕ್ಷಿತ ಆ್ಯಕ್ಷನ್‌‌‌‌ ಥ್ರಿಲ್ಲರ್ "ರೇಸ್ 3' ಚಿತ್ರದ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿ ಸಿನಿಪ್ರಿಯರಲ್ಲಿ ಸಕತ್ ಕ್ರೇಜ್ ಹುಟ್ಟು ಹಾಕಿದ್ದು, ಈ ನಡುವೆ ಚಿತ್ರತಂಡ ಚಿತ್ರದ "ಅಲ್ಲಾ ದುಹಾಯಿ ಹೈ' ಸಾಂಗ್ ಬಿಡುಗಡೆ ಮಾಡಿದ್ದು, ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ.

ಅಲ್ಲದೇ ಈ ಹಾಡಿಗೆ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಎಲ್ಲರೂ ಬೊಂಬಾಟ್ ಹೆಜ್ಜೆ ಹಾಕಿದ್ದಾರೆ. ಇನ್ನು ಚಿತ್ರದಲ್ಲಿ ಸಲ್ಮಾನ್ ಖಾನ್ ಸಿಖಂದರ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರವು ಜೂನ್ ತಿಂಗಳ ಈದ್‍ಗೆ ತೆರೆಗೆ ಬರಲು ಸಜ್ಜಾಗಿದ್ದು, ಕೊರಿಯೋಗ್ರಾಫರ್ ರೇಮೊ ಡಿಸೋಜಾ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್, ಬಾಬ್ಬಿ ಡಿಯೊಲ್, ಡೈಸಿ ಶಾ, ಅನಿಲ್ ಕಪೂರ್ ಮತ್ತು ಸಾಕೀಬ್ ಸಲೀಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಸೈಫ್ ಆಲಿಖಾನ್ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ, ಆದರೆ ಮೂರನೇ ಹಂತದಲ್ಲಿ ಸಲ್ಮಾನ್ ಖಾನ್ ಮೂಲಕ ಚಿತ್ರಕ್ಕೆ ತಿರುವು ನೀಡಲಾಗಿದೆ. ಸಿನಿಮಾದ ಆ್ಯಕ್ಷನ್ ದೃಶ್ಯಗಳನ್ನು ಈಗಾಗಲೇ ಅಬುದಾಬಿಯಲ್ಲಿ ಚಿತ್ರಿಕರಿಸಲಾಗಿದೆ. 

ಇದೊಂದು ಪಕ್ಕಾ ಆ್ಯಕ್ಷನ್‌‌‌‌ ಥ್ರಿಲ್ಲರ್ ಕಥೆ ಹೊಂದಿರುವ ಬಾಲಿವುಡ್‌‌‌‌ನ ಬಹುನಿರೀಕ್ಷಿತ ಸಿನಿಮಾವಾಗಿದೆ. ಇನ್ನು ಚಿತ್ರವನ್ನು ಟಿಪ್ಸ್‌ ಫಿಲ್ಮ್ಸ್ ಬ್ಯಾನರ್ ಅಡಿ ರಮೇಶ್‌‌ ಟೌರಾನಿ ಹಾಗೂ ಸಲ್ಮಾನ್‌‌‌ ಖಾನ್‌ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಈಗಾಗಲೇ ಚಿತ್ರದ "ಅಲ್ಲಾ ದುಹಾಯಿ ಹೈ' ಹಾಡನ್ನು ಒಂದು ಕೋಟಿಗೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.


Trending videos

Back to Top