“ಅಲ್ಲಾ ದುಹಾಯಿ ಹೈ’ ಸಾಂಗ್ಗೆ ಸಿನಿಪ್ರಿಯರ ಉಘೇ ಉಘೇ: Watch
Team Udayavani, Jun 5, 2018, 3:51 PM IST
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಯನದ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ “ರೇಸ್ 3′ ಚಿತ್ರದ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿ ಸಿನಿಪ್ರಿಯರಲ್ಲಿ ಸಕತ್ ಕ್ರೇಜ್ ಹುಟ್ಟು ಹಾಕಿದ್ದು, ಈ ನಡುವೆ ಚಿತ್ರತಂಡ ಚಿತ್ರದ “ಅಲ್ಲಾ ದುಹಾಯಿ ಹೈ’ ಸಾಂಗ್ ಬಿಡುಗಡೆ ಮಾಡಿದ್ದು, ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ.
ಅಲ್ಲದೇ ಈ ಹಾಡಿಗೆ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಎಲ್ಲರೂ ಬೊಂಬಾಟ್ ಹೆಜ್ಜೆ ಹಾಕಿದ್ದಾರೆ. ಇನ್ನು ಚಿತ್ರದಲ್ಲಿ ಸಲ್ಮಾನ್ ಖಾನ್ ಸಿಖಂದರ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರವು ಜೂನ್ ತಿಂಗಳ ಈದ್ಗೆ ತೆರೆಗೆ ಬರಲು ಸಜ್ಜಾಗಿದ್ದು, ಕೊರಿಯೋಗ್ರಾಫರ್ ರೇಮೊ ಡಿಸೋಜಾ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್, ಬಾಬ್ಬಿ ಡಿಯೊಲ್, ಡೈಸಿ ಶಾ, ಅನಿಲ್ ಕಪೂರ್ ಮತ್ತು ಸಾಕೀಬ್ ಸಲೀಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಸೈಫ್ ಆಲಿಖಾನ್ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ, ಆದರೆ ಮೂರನೇ ಹಂತದಲ್ಲಿ ಸಲ್ಮಾನ್ ಖಾನ್ ಮೂಲಕ ಚಿತ್ರಕ್ಕೆ ತಿರುವು ನೀಡಲಾಗಿದೆ. ಸಿನಿಮಾದ ಆ್ಯಕ್ಷನ್ ದೃಶ್ಯಗಳನ್ನು ಈಗಾಗಲೇ ಅಬುದಾಬಿಯಲ್ಲಿ ಚಿತ್ರಿಕರಿಸಲಾಗಿದೆ.
ಇದೊಂದು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಕಥೆ ಹೊಂದಿರುವ ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾವಾಗಿದೆ. ಇನ್ನು ಚಿತ್ರವನ್ನು ಟಿಪ್ಸ್ ಫಿಲ್ಮ್ಸ್ ಬ್ಯಾನರ್ ಅಡಿ ರಮೇಶ್ ಟೌರಾನಿ ಹಾಗೂ ಸಲ್ಮಾನ್ ಖಾನ್ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಈಗಾಗಲೇ ಚಿತ್ರದ “ಅಲ್ಲಾ ದುಹಾಯಿ ಹೈ’ ಹಾಡನ್ನು ಒಂದು ಕೋಟಿಗೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು